ಮೈಸೂರು: ಭಾರತದ ಸಂಸ್ಕೃತಿಯನ್ನು ಅರಿಯಲು ಸಂಸ್ಕೃತ ಭಾಷೆ ಅವಶ್ಯಕವಾಗಿದೆ ಎಂದು ವಿದ್ವಾಂಸ ಹೆಚ್.ಎಲ್. ಚಿದಂಬರ ಭಟ್ಟರವರು ಮೈಸೂರು ವಾಣಿವಿಲಾಸ ರಸ್ತೆಯಲ್ಲಿರುವ ಕೆಎಸ್‌ಎಸ್ ಸಂಸ್ಕೃತ ಪಾಠಶಾಲೆಯಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಆಶ್ರಯದಲ್ಲಿ ೧೦ ದಿನಗಳ ಕಾಲ ಆಯೋಜಿಸಿರುವ ಸಂಸ್ಕೃತ ಸಂಭಾಷಣ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ತಿಳಿಸಿದರು.
ಸಂಸ್ಕೃತ ಭಾಷೆಯು ಅನುಪಮ ಭಾಷೆಯಾಗಿದೆ. ಈ ಭಾಷೆಯಲ್ಲಿರುವ ಶಬ್ದ ಭಂಡಾರವು ಎಲ್ಲ ಭಾಷೆಗಳಿಗೂ ಪೂರಕವಾಗಿವೆ ಎಂದು ಹೇಳಿದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿಗಳಾದ ಶ್ರೀ ಎಸ್. ಶಿವಕುಮಾರಸ್ವಾಮಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಶಾಲಾ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಎ. ರಾಜಶೇಖರರವರು ಉಪಸ್ಥಿತರಿದ್ದರು.