ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸೋಮವಾರ ಸಾಯಂಕಾಲ ಮಾಜಿ ಸಚಿವ ಶಾಸಕ ಎಚ್ ಡಿ ರೇವಣ್ಣನವರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರು ಆದೇಶ ಹೊರಬಿಳುತ್ತಿದ್ದಂತೆ ಮೈಮಲ್ ಮಾಜಿ ಅಧ್ಯಕ್ಷ ಎ ಟಿ ಸೋಮಶೇಖರ್ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳಿ ಸೋಮಣ್ಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಿದರು.
ಸಾಲಿಗ್ರಾಮ ಪಟ್ಟಣದ ಗಾಂಧಿ ಪ್ರತಿಮೆ ಮುಂಭಾಗ ಸಭೆ ಸೇರಿದ ಜೆಡಿಎಸ್ ನ ಕಾರ್ಯಕರ್ತರು ಮುಖಂಡರು ಎಚ್ ಡಿ ರೇವಣ್ಣನವರ ಅಭಿಮಾನಿಗಳು ಜಯ ಘೋಷಗಳನ್ನು ಕೂಗುತ್ತಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸತ್ಯಕ್ಕೆ ಜಯ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಶಾಸಕ ಎಚ್ ಡಿ ರೇವಣ್ಣನವರಿಗೆ ಮಾಜಿ ಸಚಿವ ಸಾ ರಾ ಮಹೇಶ್ ಅವರಿಗೆ ಜಯವಾಗಲಿ ಎಂದು ಜಯಗೋಷಗಳನ್ನು ಕೂಗಿದರು.
ನಂತರ ಮಾತನಾಡಿದ ಮೈಮಲ್ ಮಾಜಿ ಅಧ್ಯಕ್ಷ ಎ ಟಿ ಸೋಮಶೇಖರ್ ಯಾವುದೇ ಅಪರಾಧ ಮಾಡದಿದ್ದರೂ ಸತ್ಯ ಅಸತ್ಯಗಳನ್ನು ಪರಿಶೀಲಿಸದೆ ಏಕಾಏಕಿ ಮಾಜಿ ಮಂತ್ರಿ ಹಾಲಿ ಶಾಸಕ ಎಚ್ ಡಿ ರೇವಣ್ಣನವರನ್ನು ಬಂಧಿಸುವ ಮೂಲಕ ಕಾನೂನನ್ನೇ ಬುಡಮೇಲು ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಕಾನೂನಿಗೆ ಯಾರು ದೊಡ್ಡವರಲ್ಲ ತಪ್ಪು ಯಾರು ಮಾಡಿದರು ಅವರಿಗೆ ಶಿಕ್ಷೆ ಆಗಬೇಕು ಆದರೆ ದುರುದ್ದೇಶದಿಂದ ಕೇವಲ ಚುನಾವಣೆಗಾಗಿ ದ್ವೇಷದ ರಾಜಕಾರಣವನ್ನು ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ನಿಲುವನ್ನು ಖಂಡಿಸುತ್ತೇವೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಿರುವ ಎಸ್ಐಟಿ ತಂಡ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಲಹೆಯಂತೆ ತನಿಖೆ ಮಾಡುತ್ತಿದ್ದು ಈ ತನಿಖೆಯಿಂದ ನ್ಯಾಯ ದೊರೆಯುವುದಿಲ್ಲ ಆದ್ದರಿಂದ ಸಿಬಿಐ ಅಥವಾ ಉನ್ನತ ನ್ಯಾಯಾಧೀಶರಿಂದ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.
ಇಂತಹ ಆಪಾದನೆಗಳನ್ನು ಮಾಡುವ ಮೂಲಕ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಜನಬೆಂಬಲವನ್ನು ತಗ್ಗಿಸಬಹುದೆಂಬ ಉದ್ದೇಶ ಅವರಿಗಿದ್ದರೆ ಅದು ಸಾಧ್ಯವಿಲ್ಲ ಆದರೆ ಈಗ ಮಾಡಿರುವ ಆರೋಪದಿಂದ ಮುಕ್ತರಾಗಿ ಹೊರಬರುವ ವಿಶ್ವಾಸವಿದ್ದು ಜೆಡಿಎಸ್ ಪಕ್ಷಕ್ಕೆ ಮತ್ತು ವರಿಷ್ಠ ರಿಗೆ ಇನ್ನು ಹೆಚ್ಚು ಜನ ಬೆಂಬಲ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಈ ವಿಜಯೋತ್ಸವದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳಿ ಸೋಮಣ್ಣ ಗ್ರಾಂ ಪಂ ಮಾಜಿ ಅಧ್ಯಕ್ಷ ಎಸ್ ಆರ್ ಪ್ರಕಾಶ್ ಸದಸ್ಯರಾದ ಹರೀಶ್ ಗಂಗಾಧರ್ ಮುಖಂಡರಾದ ಎಸ್ ಕೆ ಯೋಗಣ್ಣ ಜಯರಾಮೇಗೌಡ ಅಲ್ಪಸಂಖ್ಯಾತ ಮುಖಂಡರಾದ ಲಾಲು ಸಾಹೇಬ್ ಅಯಾಜ್ ಅಹಮದ್, ಬಿಜೆಪಿ ಮುಖಂಡರಾದ ನಟರಾಜ್ ಗ್ರಾಂ ಮಾಜಿ ಸದಸ್ಯರಾದ ಗುರು ಪ್ರಸಾದ್ ಚಿಕ್ಕನಾಯಕನಹಳ್ಳಿ ವಾಸು ಹಾಗೂ ರಾಜಣ್ಣ ರವಿ ಕೇಶವಮೂರ್ತಿ ಕಾಗೋಡು ನರಸಿಂಹ ರಾಜೀವ್ ..ವಿ ಎಸ್ ಎಸ್ ಎನ್ ನಿರ್ದೇಶಕರಾದ ಅಶೋಕ್ ನಾಗೇಂದ್ರ ಅನಂತ್ ಹಾ,ಉ,ಸ, ಸಂಘದ ಮಹೇಶ್ ತಾಪಂ ಮಾಜಿ ಅಧ್ಯಕ್ಷ ತಂದ್ರೆ ಕೊಪ್ಪಲು ರವಿ ವಾಹನ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ವಸಂತ್. ಅಂಕನಹಳ್ಳಿ ಸಚಿನ್ ರಘು ಲೋಕೇಶ್ ರಾಜು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಮತ್ತು ಎಚ್ ಡಿ ರೇವಣ್ಣ ರವರ ಅಭಿಮಾನಿಗಳು ಹಾಜರಿದ್ದರು.