ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭರಣಿ ಮಳೆ ಅಬ್ಬರ ಹಿನ್ನಲೆ ಜಿಲ್ಲೆಯ ಕೆ.ಆರ್.ಎಸ್ ಜಲಾಶಯದ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ.
ಡ್ಯಾಂ ನ ಒಳ ಹರಿವು 950 ಕ್ಯೂಸೆಕ್ ಗೆ ಹೆಚ್ಚಿದೆ.
ಕಳೆದ ನಾಲ್ಕೈದು ತಿಂಗಳಿಂದ ಒಳಹರಿವಿನ ಮಟ್ಟ ತೀವ್ರ ಕುಸಿತ ಕಂಡಿದ್ದು, 50 ಕ್ಯೂಸೆಕ್ಸ್ ಗೆ ಇಳಕೆ ಕಂಡು ಸಾಕಷ್ಟು ಆತಂಕ ಮೂಡಿಸಿತ್ತು.
ಕಳೆದ ನಾಲ್ಕೈದು ದಿನಗಳಿಂದ ಭರಣಿಯ ಅಬ್ಬರದಿಂದ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ..
ಒಳ ಹರಿವು ಹೆಚ್ಚಳದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.