ಚಿತ್ರದುರ್ಗ: ಕೌಟುಂಬಿಕ ಕಲಹಕ್ಕೆ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೊಸದುರ್ಗ ಪಟ್ಟಣದಲ್ಲಿ ನಡೆದಿದೆ. ೩೨ ವರ್ಷದ ಗೀತಾ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಗೀತಾ ದಂಪತಿ ಹೊಸದುರ್ಗ ಪಟ್ಟಣದ ಗೊರವಿನಕಲ್ಲು ಬಡಾವಣೆಯಲ್ಲಿ ವಾಸಿಸುತ್ತಿದ್ದರು. ಮೃತ ಮಹಿಳೆಯ ಕುಟುಂಬಸ್ಥರು ಗೀತಾ ಗಂಡ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಅನ್ನೋ ಆರೋಪ ಮಾಡಿದ್ದಾರೆ.ಹೊಸದುರ್ಗ ಪಟ್ಟಣದ ಗೊರವಿನಕಲ್ಲು ಬಡಾವಣೆಯಲ್ಲಿದ್ದ ಗೀತಾ ದಂಪತಿ ಗೊರವಿನಕಲ್ಲು ಬಡಾವಣೆಯ ಮನೆಯಲ್ಲಿ ಗೀತಾ (೩೨) ನೇಣಿಗೆ ಶರಣಾಗಿದ್ದಾರೆ. ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದ ಮಹಿಳೆಯ ಕುಟುಂಬಸ್ಥರು ಗೀತಾ ಪತಿ ವರದಕ್ಷಿಣೆಗಾಗಿ ಪತಿ ಕಿರುಕುಳ ನೀಡುತ್ತಿದ್ದ.ಆತನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.