ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕಿರು ಕಾಲುವೆ ಮುಚ್ಚಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ, ಒಳ ಚರಂಡಿ, ಮುಚ್ಚಿರುವುದು, ಭೂ ಸ್ವಾಧೀನ ಪರಿಹಾರ ನೀಡದಿರುವ ಬಗ್ಗೆ ಉಪ – ವಿಭಾಗಾಧಿಕಾರಿ ರವರಿಗೆ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಚಂದ್ರು ರವರು ಮನವಿ ಪತ್ರ ಸಲ್ಲಿಸಿದರು.
ಸಾಲಿಗ್ರಾಮ ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿದ ಉಪ – ವಿಭಾಗಧಿಕಾರಿ ರವರಿಗೆ ಬೆಂಗಳೂರು – ಜಲಸೂರು ಮಾರ್ಗವಾಗಿ ಕರ್ನಾಟಕ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಪ್ರಾಧಿಕಾರ ( ಕೆ – ಶಿಪ್ )ವತಿಯಿಂದ ಕೆ ಎನ್ ಆರ್ ಕಂಟ್ರಕ್ಷನ್ ರವರು ರಸ್ತೆ ಅಗಲೀಕರಣ ಕಾಮಗಾರಿ ಮಾಡುತ್ತಿದ್ದು, ಭೂಮಿ ಕಳೆದುಕೊಂಡ ಕೆಲವು ಮಾಲೀಕರಿಗೆ ಪರಿಹಾರ ನೀಡಿಲ್ಲ, ಆದರೂ ಕಾಮಗಾರಿ ಮಾಡುವುದಾಗಿ ಹೇಳುತ್ತಿದ್ದಾರೆ. ಪಟ್ಟಣದ ಸಮೀಪ ಇರುವ ಕೆ ಇ ಬಿ ಬಡಾವಣೆ ಬಳಿ ಹಾರಂಗಿ ಕಿರು ಕಾಲುವೆಯನ್ನು ಮುಚ್ಚಿದ್ದು, ಈ ಭಾಗದಲ್ಲಿ ಧನ – ಕರು, ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿ ತುಂಬಾ ತೊಂದರೆಯಾಗುತ್ತಿದೆ.
ಮೂಡಲಬೀಡು ಗೇಟ್ ಹತ್ತಿರ ಪ್ರಸ್ತುತ ವಾಗಿ ಇದ್ದ ಒಳ ಚರಂಡಿಯನ್ನು ಮುಚ್ಚಿ, ಮಳೆ ಗಾಲ ಬಂದಾಗ ಈ ಭಾಗದಲ್ಲಿ ವಾಸಿಸುತ್ತಿರುವವರಿಗೆ ಮನೆಯ ಸುತ್ತ – ಮುತ್ತ ನೀರು ತುಂಬಿ, ಮನೆಗಳು ಶಿಥಿಲ ಗೊಳ್ಳುತ್ತಿವೆ, ವಾಸಿಸುವ ಕುಟುಂಬಗಳು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಬೇಕಾದ ಪರಿಸ್ಥಿತಿ ಇದ್ದು, ರೋಗ ರುಜಿನಗಳು ಹರಡುವ ಸಾಧ್ಯತೆ ಇದೆ. ಅಸಮರ್ಪಕ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡುತ್ತಿದ್ದಾರೆ, ಈ ಭಾಗದ ಜನತೆ ಕೇಳಲು ಹೋದರೆ ಕೆ ಎನ್ ಆರ್ ಕಂಪನಿಯವರು ಹೆದರಿಸುತ್ತಿದ್ದಾರೆ, ತಾವುಗಳು ಸ್ಥಳ ಪರಿಶೀಲನೆ ಮಾಡಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕು ಎಂದು ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಹುಣಸೂರು ಉಪ – ವಿಭಾಗಾಧಿಕಾರಿ ಮಹಮದ್ ಯಾರಿಸ್ ಸುಮೈ ರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ದೂರು ಸ್ವೀಕರಿಸಿ ಮಾತನಾಡಿದ ಉಪ – ವಿಭಾಗಾಧಿಕಾರಿಗಳು ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಜರುಗಿಸಿ, ಭೂ ಮಾಲೀಕರಿಗೆ ಪರಿಹಾರ,ಕೊಡಿಸುವ ಭರವಸೆ ನೀಡಿದರು.
