ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಜನಧ್ವನಿ ಫೌಂಡೇಶನ್ ವತಿಯಿಂದ ಹುಣಸೂರಿನಲ್ಲಿ ರಕ್ತ ನಿಧಿ ಸ್ಥಾಪಿಸುವಂತೆ ಕೋರಿ ತಾಲೂಕು ತಹಸೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ವಕೀಲ ಆಯರಹಳ್ಳಿ ಪ್ರವೀಣ್ ಹುಣಸೂರು ವೇಗವಾಗಿ ಬೆಳೆಯುತ್ತಿದ್ದು ಹುಣಸೂರು ನಗರದಲ್ಲಿ ಡಿ ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆ ಜೊತೆಗೆ ಹಲವಾರು ಖಾಸಗಿ ಆಸ್ಪತ್ರೆಗಳು ತಲೆ ಎತ್ತಿವೆ ಆದರೆ ರೋಗಿಗಳು ಕೆಲ ಸಮಯದಲ್ಲಿ ರಕ್ತಕ್ಕಾಗಿ ಪರಿತಪಿಸುವಂತಾಗಿದೆ ಎಂದು ತಿಳಿಸಿದರು. ಈ ಸಮಸ್ಯೆಯಿಂದ ರಸ್ತೆ ಅಪಘಾತದ ವೇಳೆ ಮತ್ತು ಅನೇಕ ರೋಗಿಗಳಿಗೆ ಅಪರೇಷನ್ ಮಾಡುವ ವೇಳೆ ರಕ್ತದ ಕೊರತೆ ಎದುರಾಗುತ್ತಿದ್ದು ಇದನ್ನು ಮನಗೊಂಡು ಹುಣಸೂರಿನಲ್ಲಿ ರಕ್ತ ನಿಧಿ ಸ್ದಾಪನೆಯಾಗಬೇಕು ಎಂದು
ಮನವಿ ಪತ್ರದಲ್ಲಿ ಕೋರಿದ್ದೇವೆ ಎಂದು ಪ್ರವೀಣ್ ತಿಳಿಸಿದರು.
ಈ ಸಂದರ್ಭದಲ್ಲಿ ಫೌಂಡೇಶನ್ ಗೌರವಾಧ್ಯಕ್ಷ ಸುನೀಲ್ , ಕಾರ್ಯದರ್ಶಿ ಕಲ್ಕುಣಿಕೆ ಭಾಸ್ಕರ್ ,ಖಜಾಂಚಿ ಅಭಿನಾಗಮಂಗಲ ನಿರ್ದೇಶಕರುಗಳಾದ ಲೋಕೇಶ್ ,ರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.