ಮಂಡ್ಯ: ಮಂಡ್ಯ ನಗರದ ಹೊಳಲು ಸರ್ಕಲ್ ನಲ್ಲಿ ಗುಂಡಿ ಬಿದ್ದಿದ್ದ ರಸ್ತೆಯನ್ನು ಪೊಲೀಸ್ ಅಧಿಕಾರಿ ರಸ್ತೆ ಗುಂಡಿ ಮುಚ್ಚಿಸಿದ್ದಾರೆ.
ಸಾರ್ವಜನಿಕ ಸಮಸ್ಯೆ ಕಂಡು ಸ್ವತಃ ಮುಂದಾಳತ್ವ ವಹಿಸಿ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯ ಪಿಎಸ್ ಐ ವರ್ಷಾ ಗುಂಡಿ ಮುಚ್ಚಿಸಿದ್ದಾರೆ.
ಸಾಕಷ್ಟು ಗುಂಡಿಗಳಿಂದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿತ್ತು. ಇದನ್ನು ಕಂಡು ಪಿಎಸ್ಐ ವರ್ಷಾ ಸ್ವತಃ ಗುಂಡಿ ಮುಚ್ಚಿಸಿದ್ದಾರೆ.

ಟಿಪ್ಪರ್ ಮೂಲಕ ಮಣ್ಣು ತರಿಸಿ ಜೆಸಿಬಿಯಲ್ಲಿ ಹೊಳಲು ವೃತ್ತದ ಬಳಿ ಸರಣಿ ಗುಂಡಿಗಳನ್ನ ಮುಚ್ಚಿಸಿ ಮನವಿಯತೆ ಮೆರೆದಿದ್ದಾರೆ. ಗುಂಡಿ ಮುಚ್ಚಿಸಿದ ಪೊಲೀಸ್ ಅಧಿಕಾರಿ.
ನಿತ್ಯ ಕಿರಿಕಿರಿ ಉಂಟುಮಾಡಿದ್ದ ಗುಂಡಿಗಳಿಂದ ತಾತ್ಕಾಲಿಕ ಪರಿಹಾರ ಸಿಕ್ಕಿದ ಹಿನ್ನಲೆ ಪಿಎಸ್ಐ ವರ್ಷಾ ಅವರ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.