ವರದಿ ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕು ಬರ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ತಾಲ್ಲೂಕು ಆಡಳಿತ ಮೇವು, ಗೋಶಾಲೆ, ತೆರೆಯದೇ, ಸಮರ್ಪಕ ಕುಡಿಯುವ ನೀರು ಒದಗಿಸದೇ ಸಂಪೂರ್ಣವಾಗಿ ವಿಫಲವಾಗಿದ್ದು, ತಾಲ್ಲೂಕು ಆಡಳಿತದ ವಿರುದ್ದ ಹಾಗೂ ತಹಸೀಲ್ದಾರ್ ಸಿ. ಎಸ್.ಪೂರ್ಣಿಮಾ ಅವರ ವರ್ತನೆಯ ವಿರುದ್ದ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬುಬೆಳೆಗಾರರ ಸಂಘ ಇಂದು ಪಟ್ಟಣದ ತಾಲ್ಲೂಕು ಕಚೇರಿ ಎದುರಿನಲ್ಲಿ ರೈತರು, ಪ್ರಗತಿಪರರು, ಉಗ್ರ ಪ್ರತಿಭಟನೆ ಮಾಡಿ ತಾಲ್ಲೂಕು ಆಡಳಿತ ಕಚೇರಿಗೆ ಮುತ್ತಿಗೆಹಾಕುವ ಪ್ರಯತ್ನ ನಡೆಯಿತು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬುಬೆಳೆಗಾರರ ಸಂಘ ಸದಸ್ಯರು, ವಿವಿದ ರೈತ ಸಂಘಟನೆಯ ಸದಸ್ಯರು ತಾಲ್ಲೂಕು ಕಚೇರಿ ಆವರಣದಲ್ಲಿ ಜಮಾವಣೆಗೊಂಡು ಮಹಾತ್ಮಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ತಾಲ್ಲೂಕು ಕಚೇರಿ ಒಳಗೆ ಮುತ್ತಿಗೆ ಹಾಕಲು ನುಗ್ಗುವ ಯತ್ನ ಮಾಡಿದಾಗ ಸ್ಥಳದಲ್ಲಿದ್ದ ಪೊಲೀಸರು ಬಿಗಿ ಭದ್ರತೆಯಿಂದ ತಡೆದರು. ಈ ವೇಳೆ ರೈತ ಸಂಘಟನೆ ಮುಖಂಡರು ಪೊಲೀಸರೊಂದಿಗೆ ಮಾತಿನ ಚಕಮುಖಿ ನಡೆಸಿದರು. ನಾವು ನ್ಯಾಯ ಕೇಳಲು ಬಂದಿದ್ಸೇವೆ, ಇಲ್ಲಿ ಯಾರು ಲಾಂಗು, ಮಚ್ಷು ತಂದಿಲ್ಮ, ತಡೆಯ ಬೇಡಿ ಒಳಗೆ ಬಿಡಿ ಎಂದು ಪೊಲೀಸರ ವಿರುದ್ದ ಗುಡುಗಿದರು.
ತಾಲ್ಲೂಕು ಕಚೇರಿ ಬಾಗಿಲಲ್ಲೆ ಧರಣಿ ಕುಳಿತ ರಾಜ್ಯ ರೈತ ಸಂಘಟನೆಗಳ ಒಕ್ಜೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬುಬೆಳೆಗಾರರ ಸಂಘ ಪದಾಧಿಕಾರಿಗಳು, ಸದಸ್ಯರು ತಾಲ್ಲೂಕು ಆಡಳಿತ ವಿರುದ್ದ ದಿಕ್ಕಾರದ ಘೋಷಣೆ ಕೂಗಿದರು. ಬರ ನಿರ್ವಹಣೆ ಮಾಡದೇ, ರೈತರ ಜಾನುವಾರುಗಳಿಗೆ ಮೇವು ಬ್ಯಾಂಕ್ ತೆರೆಯದೇ, ಸಮರ್ಪಕವಾಗಿ ಕುಡಿಯುವ ನೀರು ಒದಗಿಸದೆ, ಗೋಶಾಲೆ ಅರಂಭಿಸದೇ ತಾಲ್ಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ, ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನ ತಾಲ್ಲೂಕು ಆಡಳಿತ ಸಂಪೂರ್ಣವಾಗಿ ಭ್ರಷ್ಟಚಾರದ ಕೇಂದ್ದವಾಗಿದೆ, ಆಡಳಿತ ಯಂತ್ರ ಕುಸಿದಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಜೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ತಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಗಂಭೀರ ಆರೋಪ ಮಾಡಿದರು.
ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ೧೦ ಸಾವಿರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ನೀಡಿದೆ ಹೊಸದಾಗಿ ಯುವ. ಕೃಷಿಗಾರರು ಬೀದಿಗೆ ಬರುತ್ತಾರೆ, ಆಕ್ರಮ ಸಕ್ರಮ ಮತ್ತೆ ಮರು ಜಾರಿ ಮಾಡುವಂತೆ ಈ ಸಂದರ್ಭದಲ್ಲಿ ಹಕ್ಕೊತ್ತಾಯ ಮಾಡಿದ ಅವರು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು, ಮಂತ್ರಿಗಳು ಶಾಸಕರು ಹೇಳುತ್ತಾರೆ ರೈತರ ಮನೆ ಭಾಗಿಲಿಗೆ ಸರ್ಕಾರದ ಆಡಳಿತ ಎನ್ನುತ್ತಾರೆ, ಎಲ್ಲಿದೆ ನಿಮ್ಮ ಆಡಳಿತ ತೋರಿಸಿ, ರೈತರ ಜಾನುವಾರುಗಳಿಗೆ ಮೇವು ಬ್ಯಾಂಕ್, ಕುಡಿಯುವ ನೀರು ಒದಗಿಸದೇ ಇರುವುದೇ ನಿಮ್ಮ ಆಡಳಿತ ಎಂದು ರಾಜ್ಯಸರ್ಕಾರದ ವಿರುದ್ದ ವಗ್ದಾಳಿ ನಡೆಸಿದರು.
ರೈತರಿಗೆ ಬರ ಪರಿಹಾರ ನೀಡುವಲ್ಲಿ ಕೇಂದ್ರ ಮತ್ತು ರಾಜ್ಗ ಸರ್ಕಾರ ರಾಜಕಾರಣ ಮಾಡುತ್ತಿವೆ, ನಾವು ಕೇಳುತ್ತಿರುವುದು ಎನ್.ಡಿಆರ್.ಎಫ್ ಮತ್ತು ಎಸ್.ಡಿ.ಆರ್.ಫ್ ಹಣವನ್ನ ನಿಮ್ಮ ಹಣವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ರಾಜ್ಯ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಮಾತನಾಡಿ ತಾಲೂಕು ಆಡಳಿತ ದ ವೈಪಲ್ಯ ಹಾಗೂ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಅವರು ರೈತರೊಂದಿಗೆ ನಡೆದು ಕೊಳ್ಳುವ ವರ್ತನೆಯನ್ನು ಖಂಡಿಸಿದರು. ತಾಲ್ಲೂಕು ಕಚೇರಿಯಲ್ಲಿ ಲಂಚ ಕೊಡದೇ ಯಾವುದೇ ಕೆಲಸಗಳು ನಡೆಯುತ್ತಿಲ್ಲ, ಜನನ- ಮರಣ ಪತ್ರ ಪಡೆಯಲು ನಾಲ್ಕೈದು ತಿಂಗಳು ಸತಾಯಿಸುತ್ತಾರೆ. ಅದೇ ಲಂಚ ಕೊಟ್ಟರೇ ವಾರದಲ್ಲಿ ಸಿಗುತ್ತದೆ ಎಂದು ಆಕ್ರೋಶ ಭರಿತವಾಗಿ ಮಾತನಾಡಿದ ಅವರು
ರೈತರ ಪರವಾಗಿ ತಾಲ್ಲೂಕಿನ ಅಧಿಕಾರಿಗಳು ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕೆ.ಆರ್.ನಗರ ತಾಲ್ಲೂಕು ಕಛೇರಿಯಿಂದ ಡಿಸಿ ಕಛೇರಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ರೈತಮುಖಂಡರೊಟ್ಟಿಗೆ ೧೧ ಅಂಶಗಳ ಬೇಡಿಕೆ, ಹಕ್ಕೊತ್ತಾಯದ ಮನವಿ ಪತ್ರವನ್ನು ರಾಜ್ಯದ ಸರ್ಕಾರಕ್ಕೆ ಕಳುಹಿಸುವಂತೆ ತಹಸೀಲ್ದಾರ್ ಪೂರ್ಣಿಮಾ ಮತ್ತು ಸಾಲಿಗ್ರಾಮ ತಹಸೀಲ್ದಾರ್ ನರಗುಂದ ಅವರಿಗೆ ನೀಡಲಾಯಿತು.

ರೈತರು ತಾಲ್ಲೂಕು ಕಚೇರಿ ಭಾಗಿಲಲ್ಲಿ ಪ್ರತಿಭಟನೆ : ದಿಕ್ಕಾರದ ಘೋಷಣೆ ಕೂಗುತ್ತಿರುವಾಗ ಸ್ಥಳಕ್ಜೆ ಆಗಮಿಸಿದ ತಹಸೀಲ್ದಾರ್ ಪೂರ್ಣಿಮಾ ಅವರು ರಾಜ್ಯ ರೈತ ಸಂಘಟನೆಗಳ ಮುಖಂಡ ಜೊತೆ ಚರ್ಚಿಸಿದರು. ಬರ ಹಿನ್ನೆಲೆಯಲ್ಲಿ ಮೇವು, ಬ್ಯಾಂಕ್ ತೆರೆಯದೇ ಇರಲು ಪಶುವೈದ್ಯ ಇಲಾಖೆಯ ಅಧಿಕಾರಿಗಳು ೩೬ ವಾರಗಳ ವರೆವಿಗೂ ಮೇವು ಇದೆ ಎಂಬ ವರದಿ ಹಿನ್ನೆಲೆಯಲ್ಲಿ ತೆರದಿಲ, ಎಂದು ತಹಸೀಲ್ದಾರ್ ಪೂರ್ಣಿಮಾ ಸಮಜಾಯಿಷಿ ಉತ್ತರ ನೀಡಿದಾಗ ರೈತ ಸಂಘಟನೆಗಳು, ರಾಜ್ಯ ಕಬ್ಬುಬೆಳೆಗಾರರು ತೀವ್ರವಾಗಿ ಖಂಡಿಸಿದರು. ತಾಲ್ಲೂಕಿನಲ್ಲಿ ಮಳೆಯಾಗದೇ ಎಲ್ಲಿಂದ ಮೇವು ಬೆಳೆಯಲು ಸಾದ್ಯ, ಯಾರೊ ಒಂದಿಬ್ಬರು ಪಂಪ್ ಸೆಟ್ ನಲ್ಲಿ ಜೊಳ ಬೆಳದರೆ ಅದು ಎಲ್ಲರು ಬೆಳದ ಹಾಗೇನೆ ನಿಮ್ಮಂತಹ ಅಧಿಕಾರಿಗಳು ರೈತರ ಜಮೀನಿಗೆ ಬೇಟಿ ಕೊಡಿ, ಇಲ್ಲಸಲ್ಲದ ಪಟ್ಟಿಮಾಡಿ ಉತ್ತರ ಕೊಡಬೇಡಿ ಎಂದು ಪ್ರಶ್ನೆ ಮಾಡಿದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಡ್ಯ ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಹರ್ಷಕುಮಾರ್, ಕಬ್ಬು ಬೆಳೆಗಾರರ ಸಂಘದ ಚಾಮರಾಜನಗರ ಜಿಲ್ಲಾಧ್ಯಕ್ಷ ನಾಗರಾಜು,, ನಂದೀಶ್ ಕಟ್ಟೆಪುರ, ಕಬ್ಬು ಬೆಳೆಗಾರರ ಸಂಘದ ಗೌರವಧ್ಯಕ್ಷ ಮಾಯಿಗೌಡ್ರು, ತಾ.ಪ್ರಧಾನ ಕಾರ್ಯದರ್ಶಿ ಹರಂಬಳ್ಳಿ ರಮೇಶ್, ಪದಾಧಿಕಾರಿಗಳಾದ ಬಾಲು ಶಿವಣ್ಣಗೌಡ, ನಾಗರಾಜು, ಚೀರನಹಳ್ಳಿ ಕಾಳೇಗೌಡ್ರು, ಆಮ್ ಅದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಎಂ.ಜೆ.ನಾಗರಾಜೇಗೌಡ, ಅಖಂಡ ಕರ್ನಾಟಕ ಸೇವಾದಳ ಅಧ್ಯಕ್ಷ ಶಿವುಗೌಡ ಸೇರಿದಂತೆ ನೂರಾರು ರೈತರು ಇದ್ದರು.
ಕೆ.ಆರ್.ನಗರ ಪೊಲೀಸರ ಇನ್ಸ್ ಪೆಕ್ಟರ್ ಪಿ.ಸಂತೋಷ್ ಹಾಗೂ ಸಾಲಿಗ್ರಾಮ ಪೊಲೀಸ್ ಇನ್ಸ್ ಪೆಕ್ಟರ್ ಕೃಷ್ಣರಾಜು ಜಂಟಿಯಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಿದ್ದರು.