Monday, April 21, 2025
Google search engine

Homeಅಪರಾಧಲೋಕಾಯುಕ್ತ ಬಲೆಗೆ ಎಫ್‌ಡಿಎ

ಲೋಕಾಯುಕ್ತ ಬಲೆಗೆ ಎಫ್‌ಡಿಎ

ಪಿರಿಯಾಪಟ್ಟಣ: ಲಂಚ ಪಡೆಯುತ್ತಿದ್ದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ ದರ್ಜೆ ಸಹಾಯಕ ವಿಜಯ್ ಶಂಕರ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಬಂದಿಸಿದ್ದಾರೆ.

 ಕೆಲಸದ ಬಿಲ್ ಪಾಸ್ ಮಾಡುವ ವಿಚಾರವಾಗಿ ನಟೇಶ್ ಎಂಬ ವ್ಯಕ್ತಿಯಿಂದ ಚೆಕ್ ಪಡೆದಿದ್ದು ಅದನ್ನು ಹಿಂತುರುಗಿಸಲು 40 ಸಾವಿರ ರೂ ಬೇಡಿಕೆ ಇಡಲಾಗಿತ್ತು ಈ ಸಂಬಂಧ ನಟೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು ಗುರುವಾರ ಪಿರಿಯಾಪಟ್ಟಣದ ತಮ್ಮ ಕಚೇರಿ ಬಳಿ ವಿಜಯ್ ಕುಮಾರ್ ದೂರುದಾರ ನಟೇಶ್ ಅವರಿಂದ ಹಣ ಸ್ವೀಕರಿಸುವ ಸಂದರ್ಭ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಲೋಕಾಯುಕ್ತ ಎಸ್ಪಿ ಸಜಿತ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ವಿ.ಕೃಷ್ಣಯ್ಯ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಗಳಾದ  ರವಿಕುಮಾರ್, ರೂಪಶ್ರೀ, ಲೋಕೇಶ್ ಹಾಗೂ ಸಿಬ್ಬಂದಿ ಮೋಹನ್ ಗೌಡ, ವೀರಭದ್ರಸ್ವಾಮಿ, ಆಶಾ, ತ್ರಿವೇಣಿ, ಪುಷ್ಪಲತಾ, ದಿನೇಶ್, ಲೋಕೇಶ್, ಪೃಥ್ವಿಷ, ಶೇಖರ್ ಇದ್ದರು.

RELATED ARTICLES
- Advertisment -
Google search engine

Most Popular