Saturday, April 19, 2025
Google search engine

Homeಅಪರಾಧಸಿಡಿಲಿನ ಪರಿಣಾಮ ಹೊತ್ತಿ ಉರಿದ ದನದ ಕೊಟ್ಟಿಗೆ: ಹಸು ಸಜೀವ ದಹನ

ಸಿಡಿಲಿನ ಪರಿಣಾಮ ಹೊತ್ತಿ ಉರಿದ ದನದ ಕೊಟ್ಟಿಗೆ: ಹಸು ಸಜೀವ ದಹನ

ಪಾವಗಡ: ಸಿಡಿಲಿನ ರಭಸಕ್ಕೆ ಕೊಟ್ಟಿಗೆಗೆ ಬೆಂಕಿ ಬಿದ್ದು ದಗದಗನೆ ಹೊತ್ತಿ ಉರಿದ ಪರಿಣಾಮ ನಾಲ್ಕು ಹಸುಗಳ ಪೈಕಿ ಸ್ಥಳದಲ್ಲಿಯೇ ಒಂದು ಹಸು ಸಜೀವ ದಹನವಾಗಿದ್ದು, ಉಳಿದ ಮೂರು ಹಸುಗಳಿಗೆ ಗಂಭೀರ ಗಾಯಗಳಿಂದ ಪಾರಾದ ಘಟನೆ ಮೇ. 16ರ ಗುರುವಾರ ರಾತ್ರಿ ಸಂಭವಿಸಿದೆ.

ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ರಂಗಸಮುದ್ರ ಗ್ರಾಮದಲ್ಲಿ ಕರಿಯಪ್ಪ ಎಂಬವರಿಗೆ ಸೇರಿದ ಜಮೀನಿನಲ್ಲಿದ್ದ ದನದ ಕೊಟ್ಟಿಗೆಗೆ ಬೆಂಕಿ ಬಿದ್ದಿದೆ.

ಹಸುಗಳನ್ನು ರಕ್ಷಿಸಲು ಮುಂದಾಗಿದ್ದ 10ನೇ ತರಗತಿಯ ಬಾಲಕ ಮಹಾಲಿಂಗ ಎಂಬವನ ಕೈ ಬೆಂಕಿಯ ಶಾಖಕ್ಕೆ ತುತ್ತಾಗಿ ಸುಟ್ಟಿದ್ದು, ಸದ್ಯ ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಅವಘಡದ ಸಮಯ ಮಹಾಲಿಂಗ ತಾತ ಕರಿಯಪ್ಪ ಅವರ ಜೊತೆ  ಗುಡಿಸಲಿನಲ್ಲಿಯೇ ಮಲಗಿದ್ದರು. ಏಕಾಏಕಿ ಬೆಂಕಿ ಹೊತ್ತಿ ಉರಿದ ಸಂದರ್ಭ ಹಸುಗಳನ್ನು ರಕ್ಷಿಸಲು ಹೋದ ಮಹಾಲಿಂಗ ಮತ್ತು ತಾತ ಗಾಯಗೊಂಡಿದ್ದಾರೆ.

ಈ  ಘಟನೆ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES
- Advertisment -
Google search engine

Most Popular