Monday, April 21, 2025
Google search engine

Homeಅಪರಾಧಆನೇಕಲ್: ಮೊಬೈಲ್ ಚಟಕ್ಕೆ ಬಿದ್ದು ತಮ್ಮನನ್ನೆ ಕೊಂದ ಅಣ್ಣ

ಆನೇಕಲ್: ಮೊಬೈಲ್ ಚಟಕ್ಕೆ ಬಿದ್ದು ತಮ್ಮನನ್ನೆ ಕೊಂದ ಅಣ್ಣ

ಆನೇಕಲ್: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ನೆರಿಗಾ ಗ್ರಾಮದಲ್ಲಿ ಬಾಲಕನನ್ನು ಕೊಲೆ ಮಾಡಲಾಗಿತ್ತು.

ಬಹಿರ್ದೆಸೆಗೆ ತೆರಳಿದ್ದ ಬಾಲಕ ಪ್ರಾಣೇಶ್(15) ಶವವಾಗಿ ಪತ್ತೆಯಾಗಿದ್ದ.  

ಪ್ರಕರಣ ಸಂಬಂಧ ಮೊಬೈಲ್ ಚಟಕ್ಕೆ ಬಿದ್ದು ಸ್ವಂತ ತಮ್ಮನನ್ನೇ ಕೊಲೆಗೈದಿದ್ದ ಅಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.

15 ವರ್ಷದ ಪ್ರಾಣೇಶ್​ನನ್ನು ಕೊಲೆಗೈದಿದ್ದ 18 ವರ್ಷದ ಅಣ್ಣ ಶಿವಕುಮಾರ್ ಅರೆಸ್ಟ್ ಆಗಿದ್ದಾನೆ.

ಆಂಧ್ರದ ಕರ್ನೂಲ್​ನಲ್ಲಿ ಅಜ್ಜಿ ಮನೆಯಲ್ಲೇ ಇದ್ದುಕೊಂಡು ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಪ್ರಾಣೇಶ್, ಶಾಲೆಗೆ ಬೇಸಿಗೆ ರಜೆ ಹಿನ್ನೆಲೆ ತಂದೆ ತಾಯಿ ಇದ್ದ ನೆರಿಗಾ ಗ್ರಾಮಕ್ಕೆ ಬಂದಿದ್ದ. ಸಮಯ ಸಿಕ್ಕಾಗಲೆಲ್ಲ ಅಣ್ಣ ಶಿವಕುಮಾರ್ ​ನ ಮೊಬೈಲ್​ ತೆಗೆದುಕೊಂಡು ಆಟ ಆಡ್ತಿದ್ದ. ಇದು ಶಿವಕುಮಾರ್ ​ಗೆ ಕೋಪ ತರಿಸಿತ್ತು. ಹೀಗಾಗಿ ಮೇ 15ರಂದು ತಮ್ಮ ಬಹಿರ್ದೆಸೆಗೆ ಹೋದಾಗ ಅವನನ್ನು ಹಿಂಬಾಲಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪ್ರಾಣೇಶ್​ನ ತಲೆ, ಹೊಟ್ಟೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮನೆಗೆ ಬಂದು ತನಗೆ ಏನು ಗೊತ್ತಿಲ್ಲ, ತಾನು ಅಮಾಯಕನಂತೆ ಸುಮ್ಮನಾಗಿದ್ದಾನೆ.

ತಂದೆ ತಾಯಿ ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಚಿಕ್ಕ ಮಗನಿಗಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಈ ವೇಳೆ ತಮ್ಮನ ಶವ ಬಿದ್ದಿದೆ ಎಂದು ಓಡೋಡಿ ಬಂದು ಶಿವಕುಮಾರ ಪೋಷಕರಿಗೆ ಕೊಲೆಯಾಗಿದೆ ಎಂದು ತಿಳಿಸಿದ್ದಾನೆ. ಚಿಕ್ಕ ಮಗನನ್ನು ಕಳೆದುಕೊಂಡ ಪೋಷಕರು ಕಣ್ಣೀರಿಡುತ್ತಲೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಈಗ ಪೊಲೀಸರ ತನಿಖೆ ವೇಳೆ ಆರೋಪಿ ಯಾರೆಂದು ಪತ್ತೆಯಾಗಿದ್ದು ಪೋಷಕರಿಗೆ ಶಾಕ್ ಆಗಿದೆ. ತಮ್ಮನ ಶವವನ್ನ ನಾನೇ ಮೊದಲು ನೋಡಿದ್ದೆ ಎಂದು ಹೇಳುತ್ತಿದ್ದ ಶಿವಕುಮಾರನ ಮೇಲೆ ಪೊಲೀಸರಿಗೆ ಅನುಮಾನ ಬಂದಿದ್ದು ಠಾಣೆಗೆ ಕರೆದು ಕೊಂಡು ಹೋಗಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.

ಆರೋಪಿ ಶಿವಕುಮಾರ್, ನಿರ್ಮಾಣ ಹಂತದ ಕಟ್ಟಡದಿಂದ ಸುತ್ತಿಗೆ ತಂದಿದ್ದ. ಸುತ್ತಿಗೆಯನ್ನ ಜೇಬಿನಲ್ಲಿ ಇಟ್ಟುಕೊಳ್ಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೋಲೀಸರ ತನಿಖೆಯಿಂದ ಆರೋಪಿ ಕೊಲೆ ರಹಸ್ಯ ಬಯಲಾಗಿದೆ.

RELATED ARTICLES
- Advertisment -
Google search engine

Most Popular