ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಶುಷ್ರೂಷಕಿಯರು ಆಸ್ಪತ್ರೆಗಳ ಬೆನ್ನೆಲುಬು ಹಾಗೂ ಆಸ್ಪತ್ರೆಯ ಆಧಾರ ಸ್ಥಂಭಗಳು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಹೇಳಿದರು.
ಕೆ.ಆರ್.ನಗರ ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಶುಷ್ರೂಷಕಿಯರು ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧನೆಗೈದ ಮೂವರು ಶುಷ್ರೂಷಕಿಯರನ್ನು ಅಭಿನಂದಿಸಿ ಮಾತನಾಡಿದ ಅವರು ಚಿಕಿತ್ಸೆಗಾಗಿ ಬಂದಂತಹ ರೋಗಿಗಳನ್ನು ಶುಷ್ರೂಷಕಿಯರು ನಗು ಮುಖದಿಂದ ಸ್ವಾಗತಿಸಿದಾಗಲೇ ರೋಗಿಗಳ ಅರ್ಧ ಕಾಯಿಲೆ ಗುಣ ಆಗಿರುತ್ತದೆ ಎಂದರಲ್ಲದೆ ಅವರು ರೋಗಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ನರ್ಸಿಂಗ್ ವೃತ್ತಿ ಎಷ್ಟು ಪ್ರಾಮುಖ್ಯವಾದುದು ಎಂಬುದನ್ನು ಫ್ಲಾರೆನ್ಸ್ ನೈಟಿಂಗೇಲ್ ತೋರಿಸಿಕೊಟ್ಟಿದ್ದಾರೆ’ ಎಂದು ನೆನಪು ಮಾಡಿದರು.
ಶುಷ್ರೂಷಕಿಯರು ತಮ್ಮ ಕೆಲಸವನ್ನು ಬೇಸರ ಮಾಡಿಕೊಳ್ಳದೆ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ವೃತ್ತಿಯಲ್ಲಿ ಮೇಲೆ ಬರಲು ಸಾಧ್ಯ ಆದ್ದರಿಂದ ಶುಷ್ರೂಷಕಿಯರು ಆಸ್ಪತ್ರೆಯ ಆಧಾರ ಸ್ಥಂಭಗಳು. ಆಸ್ಪತ್ರೆಯಲ್ಲಿ ಶುಷ್ರೂಷಕಿಯರು ಇಲ್ಲದೆ ಕೇವಲ ವೈದ್ಯರು ಮಾತ್ರ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವುದು ಅಸಾಧ್ಯ. ದಿನವಿಡೀ ರೋಗಿಗಳ ಜೊತೆ ಇದ್ದು ಅವರಿಗೆ ಬೇಕಾದಂತಹ ಆರೈಕೆ, ಸಾಂತ್ವನ ಧೈರ್ಯವನ್ನು ನೀಡುವವರು ಶುಷ್ರೂಷಕಿಯರು ಇಂತಹ ಒಂದು ಪವಿತ್ರವಾದ ವೃತ್ತಿಯನ್ನು ಆರಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಎಲ್ಲಾ ಶುಷ್ರೂಷಕಿಯರಿಗೆ ಕೃತಜ್ಞತೆಯನ್ನು ಸಲ್ಲಿಸಿದರು
ನಾವೆಲ್ಲರೂ ಆರೋಗ್ಯವಾಗಿರಲು ಶುಷ್ರೂಷಕಿಯರು ಬಹಳ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಬಹಳಷ್ಟು ಕಷ್ಟಕರ ಸನ್ನಿವೇಶಗಳಲ್ಲಿ ಶುಷ್ರೂಷಕಿಯರು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.
– ಡಾ.ಡಿ.ನಟರಾಜು, ತಾಲ್ಲೂಕು ಆರೋಗ್ಯಾಧಿಕಾರಿ.
ಸೇವೆಯಲ್ಲಿ ದೇವರನ್ನು ಕಂಡ ಹಾಗೂ ಮಾನವ ಕುಲಕ್ಕೆ ಸೇವೆಯನ್ನು ಸಲ್ಲಿಸುತ್ತಿರುವ ಅನೇಕ ಮಾನವೀಯ ದಾದಿಯರ ಪ್ರತಿನಿಧಿಯಾದ ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಅವರು ತಾಲ್ಲೂಕಿನ ಎಲ್ಲ. ಶುಷ್ರೂಷಕಿಯರೊಟ್ಟಿಗೆ ಪುಷ್ಪಾರ್ಚನೆ ಅರ್ಪಿಸುವುದರ ಮೂಲಕ ಗೌರವವನ್ನು ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸಿದ ಮಿರ್ಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟ್ಯಾಫ್ ನರ್ಸ್ ಕಾವ್ಯ, ಮಳಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯಧಿಕಾರಿ ಮನೋಜ್ ಕುಮಾರ, ಹರದನಹಳ್ಳಿಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ಮಂಜುಳ ಅವರುಗಳನ್ಬು ಸನ್ಮಾನಿಸಲಾಯಿತು.
ತಾಲ್ಲೂಕಿನ ಎಲ್ಲಾ ವೈದ್ಯಾರದ ಡಾ.ಅಶೋಕ್, ಡಾ.ಮೀನಾಕ್ಷಿ, ಡಾ.ಸೌಜನ್ಯ, ಡಾ.ವೀರಕುಮಾರ ರೆಡ್ಡಿ, ಡಾ.ಸಚಿನ್, ಡಾ.ಉಮಾ, ಡಾ.ನಟರಾಜು, ಡಾ.ಸವಿತ, ಡಾ.ರೇವಣ್ಣ, ಡಾ.ದಿನೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆ.ವಿ. ರಮೇಶ್, ಮಹೇಶ್ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ, ಬಿಪಿಎಂ ರೇಖಾ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಪಾರ್ವತಿ, ನಾಗವೇಣಿ, ತಾಲ್ಲೂಕಿನ ಎಲ್ಲ ಸಿಬ್ಬಂದಿಗಳು ಹಾಜರಿದ್ದರು.