Tuesday, April 22, 2025
Google search engine

Homeರಾಜ್ಯಸುದ್ದಿಜಾಲಜೂನ್ ೧೫ ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ೪೨ನೇ ವಾರ್ಷಿಕ ಘಟಿಕೋತ್ಸವ

ಜೂನ್ ೧೫ ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ೪೨ನೇ ವಾರ್ಷಿಕ ಘಟಿಕೋತ್ಸವ

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ವಿಶ್ವವಿದ್ಯಾನಿಲಯದ 42 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ಜೂನ್ 15, 2024 ನೇ ಶನಿವಾರ ಮಧ್ಯಾಹ್ನ 12.15 ಕ್ಕೆ ವಿವಿಯ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ನಡೆಸಲಾಗುವುದು. ಕರ್ನಾಟಕದ ರಾಜ್ಯಪಾಲ, ಮಂಗಳೂರು ವಿವಿಯ ಕುಲಾಧಿಪತಿಗಳೂ ಆಗಿರುವ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಉಪಸ್ಥಿತರಿರಲಿದ್ದಾರೆ.

ಡೈರೆಕ್ಟರ್ ಜನರಲ್ ರಿಸರ್ಚ್ ಆಂಡ್ ಇನ್ಫಾರ್ಮೇಷನ್ ಸಿಸ್ಟಂ ಫಾರ್ ಡೆವಲಪಿಂಗ್ ಕಂಟ್ರೀಸ್ (RIS) ಇವರು ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಘಟಿಕೋತ್ಸವ ಕುರಿತ ಎಲ್ಲಾ ವಿವರಗಳನ್ನು ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣ https://www.mangaloreuniversity.ac.in/ ನಲ್ಲಿ ಪ್ರಕಟಿಸಲಾಗುವುದು. ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular