Monday, April 21, 2025
Google search engine

Homeರಾಜ್ಯಉತ್ತರಪ್ರದೇಶದಲ್ಲಿ ಐದನೇ ಹಂತದ ಮತದಾನ ಆರಂಭ

ಉತ್ತರಪ್ರದೇಶದಲ್ಲಿ ಐದನೇ ಹಂತದ ಮತದಾನ ಆರಂಭ

ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಇಂದು ಸೋಮವಾರ ಐದನೇ ಹಂತದ ಮತದಾನ ಆರಂಭವಾಗಿದ್ದು, ಎಂಟು ರಾಜ್ಯಗಳ ೪೯ ಕ್ಷೇತ್ರಗಳ ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಜಾರ್ಖಂಡ್ ಹಾಗೂ ಉತ್ತರಪ್ರದೇಶದ ಎರಡು ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ನಡೆಯುತ್ತಿದೆ. ಬಿಹಾರದ ಐದು, ಜಮ್ಮುಕಾಶ್ಮೀರದ ಒಂದು, ಜಾರ್ಖಂಡ್ನ ಮೂರು ಹಾಗೂ ಲಡಾಕ್ನ ಒಂದು, ಮಹಾರಾಷ್ಟ್ರದ ೧೩ ಹಾಗೂ ಒಡಿಶಾದ ಐದು, ಉತ್ತರಪ್ರದೇಶದ ೧೪ ಹಾಗೂ ಪಶ್ಚಿಮಬಂಗಾಳದ ಏಳು ಲೋಕಸಭಾ ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯಲಿದೆ. ೪೯ ಕ್ಷೇತ್ರಗಳಲ್ಲಿ ಒಟ್ಟು ೬೯೫ ಅಭ್ಯರ್ಥಿಗಳು ಕಣದಲ್ಲಿದ್ದು, ಮಹಾರಾಷ್ಟ್ರದಲ್ಲಿ ಗರಿಷ್ಠ ೨೬೪ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ (ರಾಯ್ಬರೇಲಿ), ಕಿಶೋರಿ ಲಾಲ್ ಶರ್ಮಾ (ಆಮೇಠಿ), ಬಿಜೆಪಿಯ ಸ್ಮೃತಿ ಇರಾನಿ (ಆಮೇಥಿ), ಪಿಯೂಶ್ ಗೋಯಲ್ (ಮುಂಬೈ ಉತ್ತರ), ರಾಜನಾಥ ಸಿಂಗ್ (ಲಕ್ನೋ) ಹಾಗ ಚಿರಾಗ್ ಪಾಸ್ವಾನ್ (ಹಾಜಿಪುರ), ಐದನೇ ಹಂತದ ಚುನಾವಣೆಯಲ್ಲಿ ಕಣದಲ್ಲಿರುವ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಜಾರ್ಖಂಡ್ ನ ಗಾಂಡೆ ಹಾಗೂ ಉತ್ತರಪ್ರದೇಶದ ಲಕ್ನೋ ಪೂರ್ವ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ.

RELATED ARTICLES
- Advertisment -
Google search engine

Most Popular