Sunday, April 20, 2025
Google search engine

Homeರಾಜ್ಯ೮ ಬಾರಿ ಮತದಾನ ಮಾಡಿ ಸಿಕ್ಕಿಬಿದ್ದ ಯುವಕ

೮ ಬಾರಿ ಮತದಾನ ಮಾಡಿ ಸಿಕ್ಕಿಬಿದ್ದ ಯುವಕ

ಉತ್ತರಪ್ರದೇಶ: ಇಟಾಹ್‌ನಲ್ಲಿ ಮೂರನೇ ಹಂತದ ಮತದಾನದಲ್ಲಿ ಯುವಕನೊಬ್ಬ ಒಂದೇ ಬೂತ್‌ನಲ್ಲಿ ೮ ಬಾರಿ ಮತ ಚಲಾಯಿಸಿ ಸಿಕ್ಕಿಬಿದ್ದಿದ್ದಾನೆ.

ಈ ವಿಡಿಯೋ ವೈರಲ್ ಆಗಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅದರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಯುವಕನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಚುನಾವಣಾ ತಂಡದ ಎಲ್ಲ ಸದಸ್ಯರನ್ನು ಅಮಾನತುಗೊಳಿಸಲಾಗಿದ್ದು, ಮರು ಮತದಾನಕ್ಕೆ ಶಿಫಾರಸು ಮಾಡಲಾಗಿದೆ.

ಮೇ ೭ ರಂದು ಮೂರನೇ ಹಂತದ ಅಡಿಯಲ್ಲಿ ಇಟಾಹ್‌ನಲ್ಲಿ ಮತದಾನ ನಡೆಯಿತು. ೨ ನಿಮಿಷ ೨೦ ಸೆಕೆಂಡ್‌ನ ಈ ವಿಡಿಯೋದಲ್ಲಿ ಈ ಯುವಕ ಪ್ರತಿ ಬಾರಿಯೂ ಮತದಾನ ಮಾಡಿದ್ದಾನೆ. ಅವರು ಕಮಲದ ಚಿಹ್ನೆಯ ಮುಂಭಾಗದಲ್ಲಿರುವ ಗುಂಡಿಯನ್ನು ಒತ್ತುವುದನ್ನು ಕಾಣಬಹುದು.

RELATED ARTICLES
- Advertisment -
Google search engine

Most Popular