Saturday, April 19, 2025
Google search engine

Homeರಾಜ್ಯಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಎರಡು ಬಸ್ಸುಗಳು : ಟ್ರಾಫಿಕ್ ಜಾಮ್. ಸವಾರರ ಪರದಾಟ

ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಎರಡು ಬಸ್ಸುಗಳು : ಟ್ರಾಫಿಕ್ ಜಾಮ್. ಸವಾರರ ಪರದಾಟ

ಚಿಕ್ಕಮಗಳೂರ: ಚಾರ್ಮಾಡಿ ಘಾಟ್ ನ ಅಣ್ಣಪ್ಪ ಸ್ವಾಮಿ ದೇವಸ್ಥಾನ ಬಳಿ ರಸ್ತೆ ಮಧ್ಯದಲ್ಲೇ ಎರಡು ಕೆಎಸ್‌ಆರ್‌ಟಿಸಿ ಬಸ್ಸುಗಳು ಕೆಟ್ಟು ನಿಂತ ಘಟನೆ ನಡೆದಿದ್ದು, ಪರಿಣಾಮ ನೂರಾರು ವಾಹನಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದೆ.

ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ವಿಷಯ ತಿಳಿದ ಹೈವೇ ಪಟ್ರೋಲ್ ನ ಎ. ಎಸ್.ಐ ಶಶಿ ಮತ್ತು ಪೊಲೀಸ್ ವಾಹನ ಚಾಲಕ ಸ್ಥಳಕ್ಕೆ ಧಾವಿಸಿ ಟ್ರಾಫಿಕ್ ಕ್ಲಿಯರ್ ಮಾಡಲು ಹರಸಹಾಸ ಪಟ್ಟಿದ್ದಾರೆ. ಚಾರ್ಮಾಡಿ ಘಾಟ್ ನಲ್ಲಿ ಬೆಳಿಗ್ಗೆಯಿಂದ ಮಳೆ ಸುರಿಯುತ್ತಿದ್ದು, ಟ್ರಾಫಿಕ್ ಜಾಮ್ ನಿಂದ ಪ್ರವಾಸಿಗರ ಪರದಾಟ ಅನುಭವಿಸಿದ್ದಾರೆ.

RELATED ARTICLES
- Advertisment -
Google search engine

Most Popular