ನವದೆಹಲಿ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಘಟನೆಯಿಂದ ಆಘಾತವಾಗಿದೆ, ಇಬ್ರಾಹಿಂ ರೈಸಿ ಭಾರತ ಹಾಗೂ ಇರಾನ್ ಸಂಬಂಧ ಉತ್ತಮವಾಗಿರಲು ಸಾಕಷ್ಟು ಕೆಲಸ ಮಾಡಿದ್ದಾರೆ. ಎಂದೂ ನಮ್ಮ ಮನಸ್ಸಿನಲ್ಲಿರುತ್ತಾರೆ ಎಂದಿದ್ದಾರೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವಿದೇಶಾಂಗ ಸಚಿವ ಹೊಸೈನ್ ಅಮೀರ್ಬುಲ್ಲಾಹಿಯಾನ್ ಮತ್ತು ಇತರರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೆಹ್ರಾನ್‌ನಿಂದ ೬೦೦ ಕಿಮೀ ದೂರದಲ್ಲಿರುವ ಅಜರ್‌ಬೈಜಾನ್‌ನ ಜೋಲ್ಫಾ ಪ್ರದೇಶದಲ್ಲಿ ಪತನಗೊಂಡಿದೆ.
ಇರಾನ್ ಅಧ್ಯಕ್ಷ ರೈಸಿ ಅವರ ಹೆಲಿಕಾಪ್ಟರ್ ಪತನದ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಬಿಕ್ಕಟ್ಟಿನ ಈ ಸಮಯದಲ್ಲಿ ಭಾರತವು ಇರಾನ್ ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಪ್ರಧಾನಿ ಮೋದಿ ಈ ಮೊದಲು ಟ್ವೀಟ್ ಮಾಡಿದ್ದರು.