ನವದೆಹಲಿ: ಪತಂಜಲಿಯ ಎಲೈಚಿ (ಏಲಕ್ಕಿ) ಸೋನ್ ಪಾಪ್ಡಿ ತಯಾರಿಕೆಯಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಉತ್ತರಾಖಂಡದ ನ್ಯಾಯಾಲಯವು ಮೂವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಪಿಥೋರಗಢ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಸಂಜಯ್ ಸಿಂಗ್ ಅವರು ಜೈಲು ಶಿಕ್ಷೆಯ ಜೊತೆಗೆ ೫-೨೫ ಸಾವಿರ ರೂಪಾಯಿವರೆಗೆ ದಂಡ ವಿಧಿಸಿದ್ದಾರೆ ಎಂದು ಅಧಿಕಾರಿ ರಿತೇಶ್ ವರ್ಮಾ ತಿಳಿಸಿದ್ದಾರೆ. ಪಿಥೋರಗಢ್‌ನ ಬೇರಿನಾಗ್ ಪಟ್ಟಣದ ಅಂಗಡಿಯ ವ್ಯಾಪಾರಿ ಲೀಲಾಧರ್ ಪಾಠಕ್‌ಗೆ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ಮತ್ತು ಉತ್ಪನ್ನವನ್ನು ಮಾರಾಟ ಮಾಡಿದ್ದಕ್ಕಾಗಿ ಐದು ಸಾವಿರ ರೂಪಾಯಿ ದಂಡ ವಿಧಿಸಿದೆ ಎಂದು ವರ್ಮಾ ಹೇಳಿದ್ದಾರೆ.
ನೈನಿತಾಲ್‌ನ ರಾಮನಗರದಲ್ಲಿರುವ ಪತಂಜಲಿಯ ಅಧಿಕೃತ ಪ್ರತಿನಿಧಿ ಕನ್ಹಾಜಿ ಡಿಸ್ಟ್ರಿಬ್ಯೂಟರ್ಸ್ ಪ್ರೈವೇಟ್ ಲಿಮಿಟೆಡ್‌ನ ಸಹಾಯಕ ವ್ಯವಸ್ಥಾಪಕ ಅಜಯ್ ಜೋಶಿ ಅವರಿಗೆ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿ ದಂಡ ವಿಧಿಸಿದೆ. ಕಂಪನಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಅಭಿಷೇಕ್ ಕುಮಾರ್ ಅವರಿಗೆ ೨೫ ಸಾವಿರ ರೂಪಾಯಿ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.