ಬೆಂಗಳೂರು: ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯೂತ್ ಕ್ಲಬ್ ಹಾಗೂ ಶ್ರೀ ಗಾಯತ್ರಿ ಮಹಿಳಾ ಸಭಾ ಬೆಂಗಳೂರು ಇವರ ಆಶ್ರಯದಲ್ಲಿ ಚಾಮರಾಜಪೇಟೆಯಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಜಯಂತಿ ಹಾಗು ಶ್ರೀ ಶಂಕರಾಚಾರ್ಯ ಜಯಂತಿ ಯನ್ನು ನಾಳೆ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ವಿಶೇಷ ಪೂಜೆ,ಅಷ್ಟೋತ್ತರ, ಪಾರಾಯಣ, ಭಜನೆ, ಹಾಗು ಪ್ರವಚನ ಹಮ್ಮಿಕೊಳ್ಳಲಾಗಿದೆ.
ಪ್ರವಚನವನ್ನು ಸಂಸ್ಕೃತಿ ಚಿಂತಕ ಹಾಗು ಶ್ರೀ ಶಂಕರ ಯುವಜನ ಅಭಿಯಾನದ ಸುರೇಶ್ ಎನ್ ಋಗ್ಬೇದಿ ನೆರವೇರಿಸಿ ಕೊಡುವರು ಎಂದು ಶ್ರಾವ್ಯ ಎಸ್ ಋಗ್ಬೇದಿ ತಿಳಿಸಿದ್ದಾರೆ.