Monday, April 21, 2025
Google search engine

Homeಸ್ಥಳೀಯಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಕ್ರಮವಹಿಸಿ : ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಲಕ್ಷ್ಮಿಕಾಂತ್

ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಕ್ರಮವಹಿಸಿ : ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಲಕ್ಷ್ಮಿಕಾಂತ್


ಸರಗೂರು: ಸರಕಾರದ ನಿಯಮನುಸಾರ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಕ್ರಮವಹಿಸಬೇಕು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಲಕ್ಷ್ಮಿಕಾಂತ್ ತಿಳಿಸಿದರು.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಜೂ.೨೯ರಂದು ನಡೆಯಲಿರುವ ಹಬ್ಬ ಸಂದರ್ಭದಲ್ಲಿ ಸಮಾಜದವರು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಹಬ್ಬದಂದು ಪ್ರಾಣಿ ಹಿಂಸೆ ಮಾಡಬಾರದು. ಶಾಂತಿ, ಸೌಹಾರ್ದದ ಸಂಕೇತ ಹಬ್ಬವಾದ ಬಕ್ರೀದ್ ಹಬ್ಬಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು. ಅರ್ಥಪೂರ್ಣವಾಗಿ ಆಚರಿಸುವ ಹಬ್ಬದಂದು ಧಾರ್ಮಿಕ ಕಾರ್ಯಕ್ರಮಗಳಿಗೆ ದಕ್ಕೆಯಾಗದಂತೆ ಪ್ರಾರ್ಥನ ಮೆರವಣಿಗೆ ನಡೆಸಬೇಕು ಎಂದು ಹೇಳಿದರು.
ಆದಿಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಶಿವಣ್ಣ ಮಾತನಾಡಿದರು. ಪಿಎಸ್‌ಐ ನಂದೀಶ್‌ಕುಮಾರ್, ಸಿಬ್ಬಂದಿಗಳಾದ ಸುಬ್ರಹ್ಮಣ್ಯ, ಇಮ್ರಾನ್ ಅಹಮದ್ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular