Saturday, April 19, 2025
Google search engine

HomeUncategorizedಆಕಸ್ಮಿಕವಾಗಿ ಗುಂಡು ತಗುಲಿ ಯೋಧ ಸಾವು

ಆಕಸ್ಮಿಕವಾಗಿ ಗುಂಡು ತಗುಲಿ ಯೋಧ ಸಾವು

ರಾಯಚೂರು: ಆಕಸ್ಮಿಕವಾಗಿ ಗುಂಡು ತಗುಲಿ ಮಾನ್ವಿ ತಾಲೂಕಿನ ಆರ್ ಜಿ ಕ್ಯಾಂಪ್ ಸಿಐಎಸ್ ಎಫ್ ಯೋಧ ರವಿಕಿರಣ್ (೩೭) ಮೃತಪಟ್ಟಿದ್ದಾರೆ.

ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಯೋಧ ರವಿಕಿರಣ್ ಚೆನೈನ ಕಲ್ಪಕಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡಿತ್ತಿದ್ದರು. ಚೆನ್ನೈ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ತಮ್ಮದೇ ಸರ್ವಿಸ್ ರೈಫಲ್ನಿಂದ ಸಿಡಿದ ಗುಂಡು ತಾಗಿ ರವಿಕಿರಣ್ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೆ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸ ಫಲಿಸದೆ ಯೋಧ ರವಿಕಿರಣ ಮೃತಪಟ್ಟಿದ್ದಾರೆ.

ಯೋಧ ರವಿಕಿರಣ್ ಪಾರ ಪಾರ್ಥಿವ ಶರೀರ ಇಂದು (ಮೇ ೨೧) ಆರ್ ಜಿ ಕ್ಯಾಂಪ್ ಗೆ ತಲುಪಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಮಾನ್ವಿ ಪಟ್ಟಣದ ಆರ್ ಜಿ ಕ್ಯಾಂಪ್ ನಲ್ಲಿ ಯೋಧನ ಅಂತ್ಯಕ್ರಿಯೆ ನೆರವೇರಿದೆ.

RELATED ARTICLES
- Advertisment -
Google search engine

Most Popular