Monday, April 21, 2025
Google search engine

Homeಬ್ರೇಕಿಂಗ್ ನ್ಯೂಸ್ಇಂದು ವಿದ್ಯುತ್ ವ್ಯತ್ಯಯ

ಇಂದು ವಿದ್ಯುತ್ ವ್ಯತ್ಯಯ

ಮೈಸೂರು: ಇಂದು ಜೂ.27 ರ ಬೆಳಿಗ್ಗೆ 10 ರಿಂದ ಸಂಜೆ 5:30 ಗಂಟೆಯವರೆಗೆ 66/11 ಕೆ.ವಿ ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು, ವಿದ್ಯುತ್ ಸರಬರಾಜಿನಲ್ಲಿ ಅನಿಯಮಿತ ನಿಲುಗಡೆಯಾಗಲಿದೆ.

ವಿದ್ಯುತ್ ವ್ಯತ್ಯಯವಾಗಲಿರುವ ಮುಖ್ಯ ಪ್ರದೇಶಗಳು: ರಾಮಾನುಜ ರಸ್ತೆ 1 ರಿಂದ 9 ನೇ ಕ್ರಾಸ್ ವರೆಗೆ, ಹೊಸಬಂಡಿಕೇರಿ, ಜೆ.ಎಸ್.ಎಸ್. ಆಸ್ಪತ್ರೆ, ಅಗ್ರಹಾರ, ಬಸವೇಶ್ವರ ರಸ್ತೆ, ಚಾಮುಂಡಿಪುರOನ ಹಲವು ಭಾಗಗಳು, ತ್ಯಾಗರಾಜ ರಸ್ತೆ, ಚಾಮುಂಡಿಬೆಟ್ಟ ಮತ್ತು ಪಾದ, ಗುಂಡುರಾವ್ ನಗರ, ದತ್ತನಗರ, ಮುನೇಶ್ವರನಗರ, ಗೌರಿಶಂಕರನಗರ, ನಂಜನಗೂಡು ಟೋಲ್ ಗೇಟ್, ತಾವರೆಕೆರೆ, ಜಾಕಿ ಕ್ವಾಟ್ರಸ್, ರೇಸ್ ಕೋರ್ಸ್ ಹಿಂಭಾಗ, ಸಬರ್ಬ್ ಬಸ್ ನಿಲ್ದಾಣ, ನಜರ್‌ಬಾದ್, ಇಟ್ಟಿಗೆಗೂಡು, ಮೃಗಾಲಯದ ಸುತ್ತ-ಮುತ್ತ, ಸರ್ಕಾರಿ ಅಥಿತಿ ಗೃಹ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು, ತಾಲ್ಲೂಕು ಕಛೇರಿ, ಡಿ. ದೇವರಾಜ ಅರಸು ರಸ್ತೆ, ಬಿ.ಎನ್. ರಸ್ತೆ, ಚಾಮುಂಡಿಬೆಟ್ಟ, ಸಿದ್ದಾರ್ಥನಗರ, ಆಲನಹಳ್ಳಿ ಸುತ್ತ-ಮುತ್ತಲಿನ ಪ್ರದೇಶಗಳು, ಗಿರಿದರ್ಶಿನಿ ಬಡಾವಣೆ, ಅರಮನೆ ಸುತ್ತ-ಮುತ್ತಲಿನ ಪ್ರದೇಶಗಳು, ಶ್ರೀ ಹರ್ಷ ರಸ್ತೆ, ಸಯ್ಯಾಜೀರಾವ್ ರಸ್ತೆ, ಇರ್ವೀನ್ ರಸ್ತೆ ಸುತ್ತ-ಮುತ್ತಲಿನ ಪ್ರದೇಶಗಳು, ಧನ್ವಂತರಿ ರಸ್ತೆ ಹಾಗೂ ಶಿವರಾಂಪೇಟೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಮತ್ತು ಕೈಗಾರಿಕೋದ್ಯಮಿಗಳು ಸಹಕರಿಸಬೇಕೆಂದು ಚಾ.ವಿ.ಸ.ನಿ.ನಿ. ಯ ನ.ರಾ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular