Monday, April 21, 2025
Google search engine

Homeಅಪರಾಧಕಾನೂನುರೇವ್ ಪಾರ್ಟಿ ಪ್ರಕರಣ ಸಿಸಿಬಿಗೆ ವರ್ಗಾವಣೆ

ರೇವ್ ಪಾರ್ಟಿ ಪ್ರಕರಣ ಸಿಸಿಬಿಗೆ ವರ್ಗಾವಣೆ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಹೊರವಲಯದಲ್ಲಿ ಮೇ.19 ರಂದು ನಡೆದಿದ್ದ ರೇವ್ ಪಾರ್ಟಿ ಪ್ರಕರಣವನ್ನು ಅಧಿಕೃತವಾಗಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.

ಈ ಬಗ್ಗೆ ಡಿಜಿ ಅಂಡ್ ಐಜಿಪಿ ಅಲೋಕ್ ಮೋಹನ್ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಸದ್ಯ ಸಿಸಿಬಿ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ಇನ್ಸ್ಪೆಕ್ಟರ್ ಲಕ್ಷ್ಮೀ ಪ್ರಸಾದ್ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ಮೇ.19ರ ಭಾನುವಾರ ಮಾತ್ರ ರೇವ್ ಪಾರ್ಟಿ ನಡೆದಿದೆ ಎನ್ನಲಾಗುತ್ತಿತ್ತು. ಆದರೆ ತನಿಖೆ ವೇಳೆ ಈ ಪಾರ್ಟಿ ಶನಿವಾರ ಸಂಜೆ ಐದು ಘಂಟೆಯಿಂದ ಶುರುವಾಗಿದ್ದು ಎಂದು ತಿಳಿದುಬಂದಿದೆ.

ಪಾರ್ಟಿಯಲ್ಲಿ ಒಟ್ಟು 250ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು ಎಂಬ ಶಂಕೆ ವ್ಯಕ್ತವಾಗಿದ್ದು ಹಲವಾರು ಜನರು ಶನಿವಾರ ಪಾರ್ಟಿಗೆ ಬಂದು ವಾಪಸ್ಸು ಹೋಗಿದ್ದಾರೆ. ಇನ್ನೂ ಕೆಲವರು ಭಾನುವಾರ ಪಾರ್ಟಿಗೆ ಜಾಯಿನ್ ಆಗಿದ್ದಾರೆ. ಪೊಲೀಸ್ ದಾಳಿ ವೇಳೆ ಸಹ ಕೆಲವರು ಎಸ್ಕೇಪ್ ಆಗಿದ್ದಾರೆ. ಸದ್ಯ ಎಸ್ಕೇಪ್ ಆಗಿದ್ದವರನ್ನು ವಿಚಾರಣೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ.

ಇಲ್ಲಿ ಡ್ರಗ್ಸ್ ಮಾತ್ರ ಅಲ್ಲ ಸೆಕ್ಸ್ ಸಹ ಇತ್ತು ಎಂಬ ಶಾಕಿಂಗ್ ಮಾಹಿತಿ ತಿಳಿದುಬಂದಿದೆ. ಡ್ರಗ್ಸ್ ಜಾಲದ ಜೊತೆಗೆ ಸೆಕ್ಸ್‌ ಜಾಲದ ಬಗ್ಗೆ ಸಿಸಿಬಿಗೆ ಕೆಲ ಮಾಹಿತಿಗಳು ಲಭ್ಯವಾಗಿವೆ. ಈ ಹಿನ್ನಲೆ ಪ್ರಕರಣದ ತೀವ್ರತೆ ಹೆಚ್ಚಿದೆ. ವಾಸು ಬರ್ತಡೆ ಪಾರ್ಟಿ ಎಂದು ನೆಪಕ್ಕೆ ಆಯೋಜನೆ ಮಾಡಿದ್ದು ಅಕ್ರಮ ನಡೆಸಲಾಗಿದೆ. ಓರ್ವರಿಗೆ ಇಂತಿಷ್ಟು ಎಂದು ಹಣ ಪಡೆದು ಪಾರ್ಟಿಗೆ ಕರೆಸಿದ್ದಾರೆ. ಸಿಕ್ಕ ಮಾಹಿತಿ ಪ್ರಕಾರ ಓರ್ವನ ಎಂಟ್ರಿಗೆ ಎರಡು ಲಕ್ಷ ಪಡೆಯಲಾಗಿದೆ ಎನ್ನಲಾಗುತ್ತಿದೆ.

ಅಲ್ಲದೆ ಪೊಲೀಸರು ಬಂದು ಕೇಳಿದ್ರೆ ನಾವು ಬರ್ತಡೆಗೆ ಬಂದಿದ್ದೇವೆ. ನಾವೆಲ್ಲರೂ ವಾಸು ಗೆಳೆಯರು ಎಂದು ಹೇಳಬೇಕು ಎಂದು ಹೇಳಿಕೊಡಲಾಗಿತ್ತು. ಅದ್ರಂತೆ ಪೊಲೀಸರು ಪ್ರಶ್ನೆ ಮಾಡಿದಾಗ ವಾಸು ಬರ್ತಡೆಗೆ ಬಂದಿದ್ದೇವೆ ಎಂದು ಎಲ್ಲಿದ್ದವರು ಹೇಳಿಕೆ ನೀಡಿದ್ದರು. ತನಿಖೆ ವೇಳೆ ಬರ್ತಡೆ ಪಾರ್ಟಿ ಸುಳ್ಳು ಎಂಬುದು ಬಯಲಾಗಿದೆ.

ಸಿಸಿಬಿ ಪೊಲೀಸರಿಗೆ ಕಮಿಷನರ್ ಬಿ ದಯಾನಂದ ಖಡಕ್ ಸೂಚನೆ ನೀಡಿದ್ದು ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಎಂದಿದ್ದಾರೆ. ನಗರದಲ್ಲಿ ಇಂತಹ ಡ್ರಗ್ಸ್ ಮತ್ತು ರೇವ್ ಪಾರ್ಟಿಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು. ಪಾರ್ಟಿ ಆಯೋಜನೆ, ಪಾರ್ಟಿಗೆ ಡ್ರಗ್ಸ್ ಸಪ್ಲೆ, ಪಾರ್ಟಿಗೆ ಸ್ಥಳದ ಅವಕಾಶ ನೀಡುವುದು ಹೀಗೆ ಎಲ್ಲಾ ಮಾದರಿಯಲಿಯೂ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular