Sunday, April 20, 2025
Google search engine

Homeಅಪರಾಧಚಿತ್ರನಟಿ ವಿದ್ಯಾ ಕೊಲೆ ಆರೋಪಿ ನಂದೀಶ್ ಬಂಧನ

ಚಿತ್ರನಟಿ ವಿದ್ಯಾ ಕೊಲೆ ಆರೋಪಿ ನಂದೀಶ್ ಬಂಧನ

ಬನ್ನೂರು : ಚಿತ್ರನಟಿ ಹಾಗೂ ನಗರ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ವಿದ್ಯಾ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿ ನಂದೀಶ್‌ನನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ವಿದ್ಯಾ ಸೋಮವಾರ ತಡರಾತ್ರಿ ತಿ.ನರಸೀಪುರ ತಾಲ್ಲೂಕಿನ ತುರಗನೂರಿನಲ್ಲಿರುವ ಪತಿಯ ಮನೆಗೆ ತೆರಳಿದ್ದಾಗ ಇಬ್ಬರ ನಡುವೆ ಜಗಳವಾಗಿ, ಆರೋಪಿಯು ಪತ್ನಿಯ ತಲೆಗೆ ತಲವಾರಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಅಲ್ಲಿಂದ ಮಂಡ್ಯದಲ್ಲಿರುವ ಚಿಕ್ಕಮ್ಮನ ಮನೆಗೆ ತೆರಳಿದ್ದ ಆರೋಪಿ, ನಂತರ ಬೆಂಗಳೂರಿನ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದರು. `ಆ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೊಲೀಸರ ತಂಡ ಆತನನ್ನು ಬಂಧಿಸಿ, ಸ್ಥಳ ಮಹಜರು ನಡೆಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular