Sunday, April 20, 2025
Google search engine

HomeUncategorizedರಾಷ್ಟ್ರೀಯಮೇ 25ರಂದು ಹಂತ 6ರ ಮತದಾನ: ಇಂದು ಬಹಿರಂಗ ಪ್ರಚಾರಕ್ಕೆ ತೆರೆ

ಮೇ 25ರಂದು ಹಂತ 6ರ ಮತದಾನ: ಇಂದು ಬಹಿರಂಗ ಪ್ರಚಾರಕ್ಕೆ ತೆರೆ

ಹೊಸದಿಲ್ಲಿ: 6 ರಾಜ್ಯ 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 58 ಲೋಕಸಭಾ ಕ್ಷೇತ್ರಗಳಿಗೆ ಮೇ 25ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆ ಬೀಳಲಿದೆ.

ಶನಿವಾರ ನಡೆಯಲಿರುವ ಚುನಾವಣೆಯಲ್ಲಿ ಬಿಹಾರ, ದಿಲ್ಲಿ, ಹರಿಯಾಣ, ಜಮ್ಮು-ಕಾಶ್ಮೀರ, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಲ, ಝಾರ್ಖಂಡ್‌ನ‌ ಒಟ್ಟು 58 ಲೋಕಸಭಾ ಕ್ಷೇತ್ರಗಳ 889 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ರಾಷ್ಟ್ರರಾಜಧಾನಿ ದಿಲ್ಲಿಯ ಎಲ್ಲ 7 ಲೋಕಸಭೆ ಕ್ಷೇತ್ರಗಳಿಗೆ ಹಾಗೂ ಹರ್ಯಾಣದ 10 ಲೋಕಸಭಾ ಕ್ಷೇತ್ರಗಳಿಗೂ ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಇನ್ನು ಮೇ7 ರಂದೇ ಚುನಾ ವಣೆಗೆ ದಿನಾಂಕ ನಿಗದಿಯಾಗಿ ಬಳಿಕ ಪ್ರಾಕೃತಿಕ ಅಡೆತಡೆಗಳಿಂದ ಸಂಪರ್ಕ -ಸಂವಹನ ವ್ಯವಸ್ಥೆಗೆ ತೊಂದರೆ ಯಾಗಿ ಮೇ25ಕ್ಕೆ ಮುಂದೂಡಲ್ಪಟ್ಟ ಜಮ್ಮು -ಕಾಶ್ಮೀ ರದ ಅನಂತ್‌ನಾಗ್‌-ರಜೌರಿ ಲೋಕಸಭಾ ಕ್ಷೇತ್ರಕ್ಕೂ ಇದೇ ಹಂತ ದಲ್ಲಿ ಮತದಾನ ನಡೆಯಲಿದೆ.

ಯಾವೆಲ್ಲ ಪ್ರಮುಖರು ಕಣಕ್ಕೆ : ಬಾನ್ಸುರಿ ಸ್ವರಾಜ್‌, ಮನೋಜ್‌ ತಿವಾರಿ, ಕನ್ಹಯ್ಯ ಕುಮಾರ್‌, ಅಭಿಜಿತ್‌ ಗಂಗೋಪಾಧ್ಯಾಯ, ನವೀನ್‌ ಜಿಂದಾಲ್‌, ರಾಜ್‌ ಬಬ್ಬರ್‌, ದೀಪೇಂದ್ರ ಸಿಂಗ್‌ ಹೂಡಾ, ಧರ್ಮೇಂದ್ರ ಪ್ರಧಾನ್‌, ಸಂಜಯ್‌ ಸೇs…, ಮನೇಕಾ ಗಾಂಧಿ, ನೀರಜ್‌ ತ್ರಿಪಾಠಿ, ಮೆಹಬೂಬಾ ಮುಫ್ತಿ, ಮನೋಹರ್‌ಲಾಲ್‌ ಕಟ್ಟರ್‌, ಸಂಬೀತ್‌ ಪಾತ್ರ, ಸುಶೀಲ್‌ ಗುಪ್ತಾ ಸೇರಿದಂತೆ ಹಲವು ಘಟಾನುಘಟಿ ನಾಯಕ ರು ಲೋಕಸಭೆಯ 6ನೇ ಹಂತದಲ್ಲಿ ಕಣಕ್ಕಿಳಿದಿದ್ದಾರೆ.

RELATED ARTICLES
- Advertisment -
Google search engine

Most Popular