Monday, April 21, 2025
Google search engine

Homeಸ್ಥಳೀಯರಾಜ್ಯಮಟ್ಟದ ಮೇಘ ಮೈತ್ರಿ ಪ್ರಶಸ್ತಿ

ರಾಜ್ಯಮಟ್ಟದ ಮೇಘ ಮೈತ್ರಿ ಪ್ರಶಸ್ತಿ


ಕೆ.ಆರ್.ಪೇಟೆ: ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಲವು ಪ್ರತಿಭಾನ್ವಿತ ಶಿಕ್ಷಕರುಗಳಿಗೆ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ ಬಾಗಲಕೋಟೆ ಇವರು ರಾಜ್ಯಮಟ್ಟದ ಮೇಘ ಮೈತ್ರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಬೆಂಗಳೂರು ಚಿತ್ರಕಲಾ ಪರಿ?ತ್ತಿನಲ್ಲಿ ನಡೆದ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಪ್ರಶಸ್ತಿಗಳನ್ನು ವಿತರಿಸಿದರು. ತಾಲೂಕಿನ ಶಿಕ್ಷಕ ಎಂ.ಪಿ. ಕಿರಣ್ ಕುಮಾರ್, ವೀರಪ್ಪ, ಮಹದೇವಸ್ವಾಮಿ, ಬಿ.ಎಸ್.ದೇವರಾಜೇಗೌಡ, ಎಸ್.ಎ.ಜಯರಾಮು ಹಾಗೂ ಶಿಕ್ಷಕಿ ನಾಗಮಣಿ ರವರಿಗೆ ರಾಜ್ಯಮಟ್ಟದ ಮೇಘಮೈತ್ರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಡಾ.ಶ್ರೀಕಾಂತ್‌ಚಿಮಲ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಎಸ್.ಮಂಜು ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular