ಮೈಸೂರು: ಬೋಗಾದಿ ಮುಖ್ಯರಸ್ತೆಯಲ್ಲಿರುವಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿಇತ್ತೀಚೆಗೆ ನರ್ಸರಿತರಗತಿಯ ಪುಟಾಣಿ ವಿದ್ಯಾರ್ಥಿಗಳಿಗೆ ‘ವಿದ್ಯಾರಂಭಂ ಓಂ ಪ್ರಥಮ’ ಅಕ್ಷರಾಭ್ಯಾಸಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪೋಷಕರುತಮ್ಮ ಮಕ್ಕಳನ್ನು ಮಡಿಲಿನಲ್ಲಿ ಕೂರಿಸಿಕೊಂಡು ಮಾತೃಪ್ರಧಾನಗುರುಕುಲ ಪದ್ಧತಿಯಂತೆ ‘ಓಂ’ಕಾರಅಭ್ಯಾಸ ಮಾಡಿಸಿ ‘ಸರಸ್ವತಿ ನಮಸ್ತುಭ್ಯಂ ವರದೇಕಾಮರೂಪಿಣಿ ವಿದ್ಯಾರಂಭಂಕರಿಷ್ಯಾಮಿ ಸಿದ್ಧಿರ್ ಭವತು ಮೇಸದಾ’ ಎಂದು ಶಾರದೆ ಸ್ತುತಿಯನ್ನು ಪಠಿಸಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ಶಾಲಾ ಆಡಳಿತಾಧಿಕಾರಿ ಶ್ರೀಮತಿ ಕಾಂತಿ ನಾಯಕ್ ಹಾಗೂ ಮುಖ್ಯೋಪಾಧ್ಯಾಯ ಮೊಹಮ್ಮದ್ ಫಾರೂಕ್ ವಹಿಸಿದ್ದರು. ಮನರಂಜನೆಗಾಗಿ ಪ್ರಿಕೆಜಿ ಹಾಗೂ ಎಲ್‌ಕೆಜಿ ಪುಟಾಣಿಗಳು ಶಿಶುಗೀತೆ ಹಾಗೂ ನೃತ್ಯವನ್ನು ಪ್ರಸ್ತುತಪಡಿಸಿದರು. ವೇದಿಕೆ ಕಾರ್ಯಕ್ರಮದ ನಂತರ ಪೋಷಕರು ಹಾಗೂ ಮಕ್ಕಳಿಗೆ ಸಿಹಿ ವಿತರಿಸಲಾಯಿತು.