ವರದಿ: ವಿನಯ್ ದೊಡ್ಡಕೊಪ್ಪಲು
ಕೆ .ಆರ್ .ನಗರ : ಸಾಲಿಗ್ರಾಮ ತಾಲೂಕಿನ ಮುಂಜನಹಳ್ಳಿ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಗೆ ಮನೆಯ ಚಾವಣಿ ಮತ್ತು ಗೋಡೆ ಕುಸಿದು ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಗ್ರಾಮದ ನಾಗಮ್ಮ ಲೇಟ್ ನಾಗೇಂದ್ರ ನಾಯಕ ರವರಿಗೆ ಸೇರಿದ ಮನೆ ಯಾಗಿದ್ದು.ಈ ಘಟನೆಯಿಂದ ಮನೆಯಲ್ಲಿ ಇದ್ದ ಲಕ್ಷಾಂತರ ಬೆಲೆಯ ಧಾನ್ಯಗಳು ನಷ್ಟ ಕೊಳಗಾಗಿದೆ ಕುಟುಂಬಸ್ಥರು ವಾಸ ಮಾಡಲು ಮನೆ ಇಲ್ಲದೆ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಷಯ ತಿಳಿದ ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಮಹದೇವ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರ ಕೂಡಲೇ ಈ ಕುಟುಂಬಕ್ಕೆ ಪರಿಹಾರ ಮತ್ತು ಆಶ್ರಯ ಮನೆ ನೀಡುವಂತೆ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆಒತ್ತಾಯಿಸಿದರು.