Saturday, April 19, 2025
Google search engine

Homeಅಪರಾಧಉತ್ತರ ಪ್ರದೇಶ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಎರಡು ಬಾರಿ ಕಾರು ಹತ್ತಿಸಿದ ಚಾಲಕ

ಉತ್ತರ ಪ್ರದೇಶ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಎರಡು ಬಾರಿ ಕಾರು ಹತ್ತಿಸಿದ ಚಾಲಕ

ಉತ್ತರ ಪ್ರದೇಶ: ಕಾರು ಚಾಲಕನೊಬ್ಬ ಎರಡೆರಡು ಬಾರಿ ಒಂದೇ ವ್ಯಕ್ತಿಯ ಮೇಲೆ ಕಾರು ಹತ್ತಿಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗುತ್ತಿದೆ. ಇದು ಅಪಘಾತವೇ ಅಥವಾ ಕೊಲೆ ಯತ್ನವೇ ಎಂಬ ಶಂಕೆ ವ್ಯಕ್ತವಾಗಿದೆ.

ಉತ್ತರ ಪ್ರದೇಶದ ಝಾನ್ಸಿಯಲ್ಲಿ ಕಿರಿದಾದ ರಸ್ತೆಯೊಂದರಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆಸಿದ್ದರು.

ಅದಾದ ಬಳಿಕ ಗಾಡಿ ಚಕ್ರಕ್ಕೆ ಸಿಲುಕಿದ್ದ ವ್ಯಕ್ತಿ ಸುಧಾರಿಸಿಕೊಳ್ಳುತ್ತಿದ್ದಂತೆ ಮತ್ತೆ ಕಾರು ಚಾಲಕ ಎದುರಿನಿಂದಲೇ ಅವರ ಮೇಲೆ ಕಾರು ಹತ್ತಿಸಿರುವ ಘಟನೆ ವರದಿಯಾಗಿದೆ. ಪ್ರೇಮ್‌ಗಂಜ್ ಕಾಲೋನಿ ಪ್ರದೇಶದಲ್ಲಿ ಗ್ಯಾಸ್ ಏಜೆನ್ಸಿ ನಿರ್ವಾಹಕರು ರಸ್ತೆಯ ಮೇಲೆ ಬಿದ್ದು, ನೋವಿನಿಂದ ಕಿರುಚಾಡುತ್ತಿರುವುದನ್ನು ಕಾಣಬಹುದು.

ಅಲ್ಲಿಯೇ ಹೋಗುತ್ತಿದ್ದವರು ವ್ಯಕ್ತಿಯ ಅರಚಾಟ ಕೇಳುತ್ತಿದ್ದಂತೆ ತಕ್ಷಣ ಆಗಮಿಸಿ ಅವರನ್ನು ಆಸ್ಪತ್ರೆಗೆ ಕಳೆದೊಯ್ದಿದ್ದಾರೆ. ಗಾಯಾಳು ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಈ ಘಟನೆಯು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ, ಇಂಥಾ ಘಟನೆ ಮರುಕಳಿಸದಂತೆ ಚಾಲಕನ ವಿರುದ್ಧ ತುರ್ತು ಕ್ರಮಕ್ಕೆ ಜನರು ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular