Sunday, April 20, 2025
Google search engine

Homeರಾಜ್ಯಹೆಚ್.ಡಿ.ಕೋಟೆ: ಎನ್.ಬೆಳತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೀಮಂತ ಕಾರ್ಯಕ್ರಮ

ಹೆಚ್.ಡಿ.ಕೋಟೆ: ಎನ್.ಬೆಳತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೀಮಂತ ಕಾರ್ಯಕ್ರಮ

ವರದಿ: ಎಡತೊರೆ ಮಹೇಶ್
ಹೆಚ್.ಡಿ.ಕೋಟೆ : ಸ್ವಾಮಿ ವಿವೇಕಾನಂದ ಯೂತ್ ಮುವ್ ಮೆಂಟ್ ಸರಗೂರು ಹಾಗೂ ಆಶ್ರಯ ಹಸ್ತ ಟ್ರಸ್ಟ್ ಮತ್ತು ಎನ್.ಬೆಳತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ದೀಪಾ ಬೆಳಗಿಸುವ ಮೂಲಕ ಮಾತನಾಡಿದ ಎನ್. ಬೆಳತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪಿ.ಹೆಚ್.ಸಿ.ಓ. ಜಯಮ್ಮ, ತಾಯಂದಿರು ಗರ್ಭಿಣಿಯ ಸಂಧರ್ಭದಲ್ಲಿ ಸಂತೋಷವಾಗಿದ್ದರೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು ಎಂಬ ಉದ್ದೇಷದಿಂದ ಸೀಮಂತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ,
ಗರ್ಭಿಣಿಯರು ಹೆಚ್ಚಾಗಿ ಹಸಿರು ಸೊಪ್ಪು, ತರಕಾರಿ ಹಳದಿ ಹಣ್ಣುಗಳನ್ನು ಸೇವನೆ ಮಾಡುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ವೃದ್ಧಿಯಾಗುತ್ತದೆ, ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ನಂತರ ಮಾತನಾಡಿದ ಗಿರಿಜನ ಆಶ್ರಮ ಶಾಲೆಯ ಶಿಕ್ಷಕ ಸಿದ್ದರಾಜು ಶಿಕ್ಷಣ್ಣವನ್ನು ಪಡೆದಂತೆಲ್ಲ ಗಿರಿಜನರು ಮುಂದೆ ಬರಬೇಕು ಪ್ರತಿಯೊಂದು ಮಗುವ ಈ ದೇಶದ ಪ್ರಜೆ ಮಗುವಿನ ಉಜ್ವಲ ಭವಿಷ್ಯಕ್ಕೆ ತಾಯಂದಿರು ಪೌಷ್ಟಿಕ ಆಹಾರಗಳನ್ನು ಸೇವನೆ ಮಾಡುವ ಮೂಲಕ ಆರೋಗ್ಯವಾದ ಮಗುವಿಗೆ ಜನ್ಮ ನೀಡಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ 9 ಜನರಿಗೆ ಸೀರೆ ಹೂ ಬಳೆ ತಾಂಬೂಲ ನೀಡಿ ಸೀಮಂತ ಮಾಡಲಾಯಿತು
ಕಾರ್ಯಕ್ರಮದಲ್ಲಿ ಗಿರಿಜನ ಆಶ್ರಮ ಶಾಲೆಯ ಶಿಕ್ಷಕರಾದ ಸಿದ್ದರಾಜು, ಸುರೇಶ್, ಅಂಗನವಾಡಿ ಸಹಾಯಕಿಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular