Sunday, April 20, 2025
Google search engine

Homeರಾಜ್ಯಸುದ್ದಿಜಾಲವಿಧಾನ ಪರಿಷತ್ ಚುನಾವಣೆ, ಮತದಾರರಿಗೆ ವೋಟರ್ ಸ್ಲಿಪ್ ವಿತರಣೆಗೆ ಡಾ.ವೆಂಕಟೇಶ್ ಸೂಚನೆ

ವಿಧಾನ ಪರಿಷತ್ ಚುನಾವಣೆ, ಮತದಾರರಿಗೆ ವೋಟರ್ ಸ್ಲಿಪ್ ವಿತರಣೆಗೆ ಡಾ.ವೆಂಕಟೇಶ್ ಸೂಚನೆ

ದಾವಣಗೆರೆ: ರಾಜ್ಯ ವಿಧಾನ ಪರಿಷತ್ತಿನ ಸ್ಥಾನಗಳಿಗೆ ಜೂನ್ 3 ರಂದು ಚುನಾವಣೆ ನಡೆಯುತ್ತಿದ್ದು ಜಿಲ್ಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ತ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿರುವುದರಿಂದ ಮತದಾರರಿಗೆ ಮತಚೀಟಿ ಹಾಗೂ ವೋಟರ್ ಗೈಡ್ ವಿತರಣೆ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ವಿಧಾನ ಪರಿಷತ್ ಸಹಾಯಕ ಚುನಾವಣಾಧಿಕಾರಿ ಡಾ ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಶುಕ್ತವಾರ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಸೂಚನೆ ನೀಡಿದರು. ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕುಗಳು ಮತ್ತು ನೈರುತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಕ್ಕೆ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲ್ಲೂಕುಗಳು ಸೇರಲಿದ್ದು ಇಲ್ಲಿನ ಮತದಾರರಿಗೆ ವೋಟರ್ ಸ್ಲಿಪ್ ಹಾಗೂ ವೋಟರ್ ಗೈಡ್ ವಿತರಣೆ ಮಾಡಲು ಸೂಚನೆ ನೀಡಿದರು. ಮತಚೀಟಿ ವಿತರಣೆಗೆ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೋಡಲ್ ಅಧಿಕಾರಿಗಳಾಗಿರುತ್ತಾರೆ ಎಂದರು.

ಮತಗಟ್ಟೆವಾರು ಮತದಾರರ ವಿವರ; ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಹರಿಹರದ ಸರ್ಕಾರಿ ಪ್ರೌಢಶಾಲೆ, ಗಾಂಧಿ ನಗರ ಇಲ್ಲಿ 461, ದಾವಣಗೆರೆಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಕೊಠಡಿ ಸಂಖ್ಯೆ.1 ರಲ್ಲಿ 707, ಇಲ್ಲಿನ ಎರಡನೇ ಮತಗಟ್ಟೆ ಕೊಠಡಿ ಸಂಖ್ಯೆ 2 ರಲ್ಲಿ 708, ಕೊಠಡಿ ಸಂಖ್ಯೆ 3 ರಲ್ಲಿ 708, ಕೊಠಡಿ 4 ರಲ್ಲಿ 708, ಕೊಠಡಿ ಸಂಖ್ಯೆ 5 ರಲ್ಲಿ 708 ಹಾಗೂ ಜಗಳೂರಿನ ತಾಲ್ಲೂಕು ಕಚೇರಿಯಲ್ಲಿ 351 ಮತದಾರರು ಸೇರಿ 4351 ಮತದಾರರಿದ್ದಾರೆ.

ನೈರುತ್ಯ ಶಿಕ್ಷಕರ ಕ್ಷೇತ್ರ; ನ್ಯಾಮತಿ ತಾಲ್ಲೂಕು ಕಚೇರಿ 79, ಹೊನ್ನಾಳಿ ತಾಲ್ಲೂಕು ಪಂಚಾಯತ್ ಸಾಮಥ್ರ್ಯಸೌಧ ಇಲ್ಲಿ 321, ಬಸವಾಪಟ್ಟಣ ಜನತಾ ಪ್ರೌಢಶಾಲೆ ಕೊಠಡಿ ಸಂಖ್ಯೆ 3 ರಲ್ಲಿ 246, ಚನ್ನಗಿರಿ ತಾಲ್ಲೂಕು ಪಂಚಾಯತ್ ಕೊಠಡಿ ಸಂಖ್ಯೆ 3 ರಲ್ಲಿ 322 ಮತದಾರರು ಸೇರಿ ಒಟ್ಟು 968. ನೈರುತ್ಯ ಪದವೀಧರರ ಕ್ಷೇತ್ರ; ನ್ಯಾಮತಿ ತಾಲ್ಲೂಕು ಕಚೇರಿ ಕೊಠಡಿ ಸಂಖ್ಯೆ 2 ರಲ್ಲಿ 1012, ಹೊನ್ನಾಳಿ ತಾಲ್ಲೂಕು ಆಡಳಿತಸೌಧ ಕೊಠಡಿ 1 ರಲ್ಲಿ 751, ಇಲ್ಲಿನ ಕೊಠಡಿ 2 ರಲ್ಲಿ 729, ಕೊಠಡಿ 3 ರಲ್ಲಿ 724, ಬಸವಾಪಟ್ಟಣ ಜನತಾ ಪ್ರೌಢಶಾಲೆ ಪೂರ್ವ ವಿಭಾಗದ ಕೊಠಡಿ 1 ರಲ್ಲಿ 765, ಇಲ್ಲಿನ ಕೊಠಡಿ 2 ರಲ್ಲಿ 764, ಚನ್ನಗಿರಿ ತಾಲ್ಲೂಕು ಪಂಚಾಯಿತಿ ಕಟ್ಟಡದ ಪೂರ್ವ ವಿಭಾಗದ ಕೊಠಡಿ 1 ರಲ್ಲಿ 907 ಹಾಗೂ ಇಲ್ಲಿನ ಕೊಠಡಿ 2 ರಲ್ಲಿ 906 ಸೇರಿ 6558 ಮತದಾರರಿದ್ದಾರೆ.

RELATED ARTICLES
- Advertisment -
Google search engine

Most Popular