ಮಂಡ್ಯ: ಗೃಹ ಸಚಿವರ ಬಗ್ಗೆ ಅಸಮರ್ಥ ಸಚಿವ ಎಂಬ ಮಾಜಿ ಶಾಸಕ ಪಿ.ರಾಜೀವ್ ಹೇಳಿಕೆಯನ್ನು ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ಕಂಠಿ ಖಂಡಿಸಿದ್ದು, ಪರಮೇಶ್ವರ್ ಅವರು ಸಜ್ಜನ ರಾಜಕಾರಣಿ ಅವರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಅವರ ಬಗ್ಗೆ ಅಸಮರ್ಥ ಅನ್ನುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆ ಇರಲಿ. ಎಲ್ಲಾ ಸರ್ಕಾರ ಇದ್ದಾಗಲೂ ಘಟನೆಗಳು ನಡೆದಿವೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಇದ್ದವರು. ಗೃಹ ಸಚಿವರು ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ ಎಂದು ಹೇಳಿದರು.
ತಕ್ಷಣವೇ ಗೃಹ ಸಚಿವರ ಕ್ಷಮೆಯಾಚನೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿ ಮೆಚ್ಚಿಸಲು ಈ ರೀತಿಯಾಗಿ ಮಾತನಾಡಿತ್ತಿದ್ದಾರೆ. 24 ಗಂಟೆಯೊಳಗೆ ಗೃಹ ಸಚಿವರ ಕ್ಷಮೆಯಾಚನೆ ಮಾಡಿ ಇಲ್ಲದಿದ್ದರೆ ಬುದ್ದಿಕಲಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ನಗರಸಭೆ ಸದಸ್ಯ ಶ್ರೀಧರ್, ಶಂಕರ್ ಲಿಂಗೇಗೌಡ, ವಿಜಯ್ ಕುಮಾರ್, ಸಿದ್ದರಾಜು ಸೇರಿ ಹಲವರು ಭಾಗಿಯಾಗಿದ್ದರು.