ಪಶ್ಚಿಮ ಬಂಗಾಳ: ಬಂಕುರಾ ಜಿಲ್ಲೆಯಲ್ಲಿ ಬಿಜೆಪಿ ಟ್ಯಾಗ್ ಇರುವ ಇವಿಎಂಗಳನ್ನು ಬಳಸಲಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಆದರೆ, ಈ ಆರೋಪವನ್ನು ಚುನಾವಣಾ ಆಯೋಗ ಅಲ್ಲಗಳೆದಿದೆ.
ಬಿಜೆಪಿಯ ಹೆಸರಿರುವ ಪೇಪರ್ ಟ್ಯಾಗ್‌ಗಳಿರುವ ಇವಿಎಂಗಳ ಎರಡು ಚಿತ್ರಗಳನ್ನು ಟಿಎಂಸಿ, ಇವಿಎಂಗಳನ್ನು ಟ್ಯಾಂಪರಿಂಗ್ ಮಾಡುವ ಮೂಲಕ ಮತಗಳನ್ನು ಬದಲಾಯಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪದೇ ಪದೇ ಹೇಳುತ್ತಿದ್ದಾರೆ. ಇದೀಗ, ಬಂಕುರಾದ ರಘುನಾಥಪುರದಲ್ಲಿ ೫ ಇವಿಎಂಗಳಲ್ಲಿ ಬಿಜೆಪಿ ಟ್ಯಾಗ್‌ಗಳು ಕಂಡುಬಂದಿವೆ. ಚುನಾವಣಾ ಆಯೋಗ ತಕ್ಷಣವೇ ಇದನ್ನು ಪರಿಶೀಲಿಸಬೇಕು ಮತ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.
ಆರೋಪಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ಆಡಳಿತಾತ್ಮಕ ಪರಿಶೀಲನೆ ನಡೆಸುವಾಗ ಮತಗಟ್ಟೆ ವಿಳಾಸದ ಟ್ಯಾಗ್‌ಗಳಿಗೆ ಅಭ್ಯರ್ಥಿಗಳು ಮತ್ತು ಅವರ ಏಜೆಂಟ್‌ಗಳು ಸಹಿ ಮಾಡಿದ್ದಾರೆ. ಚುನಾವಣಾ ಕಾರ್ಯಾರಂಭದ ಸಮಯದಲ್ಲಿ ಬಿಜೆಪಿ ಅಭ್ಯರ್ಥಿಯ ಪ್ರತಿನಿಧಿ ಮಾತ್ರ ಕಚೇರಿಯಲ್ಲಿ ಇದ್ದುದ್ದರಿಂದ ಇಗಿಒ ಮತ್ತು ಗಿಗಿPಂಖಿಗಳಿಗೆ ಅವರ ಸಹಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಕಾರ್ಯಾರಂಭದ ಸಮಯದಲ್ಲಿ ಚುನಾವಣಾ ಆಯೋಗದ ಎಲ್ಲ ಮಾನದಂಡಗಳನ್ನು ಸರಿಯಾಗಿ ಅನುಸರಿಸಲಾಗಿದೆ. ಸಂಪೂರ್ಣವಾಗಿ ಸಿಸಿಟಿವಿ ಕವರೇಜ್ ಅಡಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಮತ್ತು ಅದನ್ನು ವೀಡಿಯೊಗ್ರಾಫ್ ಮಾಡಲಾಗಿದೆ ಎಂದು ಆಯೋಗ ವಿವರಿಸಿದೆ.