Monday, April 21, 2025
Google search engine

Homeರಾಜ್ಯಸುದ್ದಿಜಾಲಲಾಠಿ ಚಾರ್ಜ್ ಮಾಡಿ ತಲೆ ಒಡೆಯುವ ಪೊಲೀಸರು, ಹರೀಶ್ ಪೂಂಜ ವಿರುದ್ಧ ಏಕೆ ಕ್ರಮ...

ಲಾಠಿ ಚಾರ್ಜ್ ಮಾಡಿ ತಲೆ ಒಡೆಯುವ ಪೊಲೀಸರು, ಹರೀಶ್ ಪೂಂಜ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ: ಅನ್ವರ್ ಸಾದತ್

ಮಂಗಳೂರು (ದಕ್ಷಿಣ ಕನ್ನಡ): ಮುಸ್ಲಿಮರು ಪ್ರತಿಭಟನೆ ಮಾಡಿದಾಗ ಲಾಠಿ ಚಾರ್ಜ್ ಮಾಡಿ ತಲೆ ಒಡೆಯುವ ಪೊಲೀಸರು, ಹರೀಶ್ ಪೂಂಜ ಮತ್ತು ಬೆಂಬಲಿಗರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಎಸ್ ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಪ್ರಶ್ನೆ ಮಾಡಿದ್ದಾರೆ.

ಅವ್ರು ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಳೆದ ೬ ವರ್ಷಗಳಿಂದ ಗೂಂಡಾ ವರ್ತನೆ ಪದೇ ಪದೇ ಪುನರಾವರ್ತನೆಯಾಗುತ್ತಿದೆ. ಒಬ್ಬ ಶಾಸಕ ಯಾವ ರೀತಿ ಇರಬಾರದು ಎನ್ನುವುದಕ್ಕೆ ಹರೀಶ್ ಪೂಂಜ ಉದಾಹರಣೆಯಾಗಿದೆ. ಬಿಜೆಪಿ ಮುಖಂಡ ಶಶಿರಾಜ್ ಶೆಟ್ಟಿ ಅಕ್ರಮ ಕಲ್ಲಿನಕೋರೆ ನಡೆಸಿ ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದರು.ಅವರನ್ನು ಬಂಧಿಸಿದ್ದಕ್ಕೆ ಶಾಸಕ ಪೂಂಜ ಅಕ್ರಮ ಕೂಟ ಕಟ್ಟಿಕೊಂಡು ಹೋಗಿ ಪೊಲೀಸರಿಗೆ ಬೈದು ಬೆದರಿಕೆ ಹಾಕಿರುವುದು ಅಪರಾಧ. ಹರೀಶ್ ಪೂಂಜ ಪದೇ ಪದೇ ಇಂಥಾ ಕೆಲಸ ಮಾಡುತ್ತಿದ್ದಾರೆ.

ಈ ಹಿಂದೆಯೂ ಕೊಲೆ ಆರೋಪಿಗಳನ್ನು ಅಪರಾಧ ಕೃತ್ಯ ಮಾಡಿದವರನ್ನು ಪೊಲೀಸರು ಬಂಧಿಸಿದಾಗ ಅವರ ಮೇಲೆ ಒತ್ತಡ ಹಾಕಿ ಆರೋಪಿಗಳನ್ನು ಠಾಣೆಯಿಂದ ಬಿಡಿಸಿಕೊಂಡು ಹೋಗಿದ್ದರು. ಕಾನೂನುಪಾಲಿಸಿಕೊಂಡು ಜನರಿಗೆ ಮಾದರಿಯಾಗಿಬೇಕಿದ್ದ ಶಾಸಕ ಗೂಂಡಾ ರೀತಿ ವರ್ತನೆ ಮಾಡಿರುವುದು ತಪ್ಪು ಎಂದರು. ಇನ್ನು
ಪ್ರತಿಭಟನಾ ಸಭೆಯಲ್ಲೂ ಪೂಂಜ ಉದ್ರೇಕಕಾರಿ ಭಾಷಣ ಮಾಡಿದ್ದಾರೆ. ಪೊಲೀಸರು ನೋಟಿಸ್ ಕೊಡಲು ಹೋದಾಗಲೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ .

ಡಿಜೆ ಹಳ್ಳಿ ಕೆಜಿ ಹಳ್ಳಿ ಥರ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಸಂಘಪರಿವಾರ ಮತ್ತು ಬಿಜೆಪಿ ಪ್ರಯೋಜಿತ ಗಲಭೆ ಎಂಬುದು ಪೂಂಜ ಮಾತುಗಳಿಂದ ಬಯಲಾಗಿದೆ. ಹೀಗಾಗಿ ಪೂಂಜ ವಿರುದ್ಧ ಯುಎಪಿಎ ಕಾಯ್ದೆಯಡಿ ಕೇಸ್ ದಾಖಲಿಸಿ ಬಂಧಿಸಬೇಕು, ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಬಗ್ಗೆ ಮರುತನಿಖೆ ನಡೆಸಬೇಕು ಎಂದರು.

RELATED ARTICLES
- Advertisment -
Google search engine

Most Popular