ಮೈಸೂರು : ನಗರದ ನರಸಿಂಹರಾಜ ಠಾಣಾ ಪೊಲೀಸರು ಒಬ್ಬ ಸರಗಳ್ಳನನ್ನು ಬಂಧಿಸಿ ಆತನಿಂದ ೨ ಲಕ್ಷ ರೂ, ಮೌಲ್ಯದ ೪೧ ಗ್ರಾಂ ಚಿನ್ನ ಮತ್ತು ಸ್ಕೂಟರ್ ವಶ ಪಡಿಸಿಕೊಂಡಿದ್ದಾರೆ.
ಎಂ.ಐ.ಟಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ತಮ್ಮ ಸ್ಕೂಟರ್‌ನಲ್ಲಿ ಕಳೆದ ಮೇ,೧೬ ರಂದು ಕಾಮನಕೆರೆ ಹುಂಡಿ ರಸ್ತೆಯಲ್ಲಿರುವ ಕೆರೆಯ ಬಳಿ ಹೋಗುತ್ತಿದ್ದಾಗ ಆರೋಪಿಯು ನಂಬರ್ ಪ್ಲೇಟ್ ಇಲ್ಲದ ಸ್ಕೂಟರ್‌ನಲ್ಲಿ ಹಿಂಭಾಗದಿಂದ ಪಕ್ಕಕ್ಕೆ ಬಂದು ಮಹಿಳೆಯ ಕತ್ತಿನಲ್ಲಿದ್ದ ೨ ಲಕ್ಷ ರೂ. ಮೌಲ್ಯದ ೪೦ ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ದೂರು ದಾಖಲಾಗಿತ್ತು.
ತನಿಖೆ ಕೈಗೊಂಡ ಎನ್‌ಆರ್ ಪೊಲೀಸರು ಮೇ,೨೩ ರಂದು ನಂಬರ್ ಪ್ಲೇಟ್ ಇಲ್ಲದ ಬರ್‍ಗ್‌ಮಾನ್ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಡಿಸಿಪಿ ಎಸ್.ಜಾಹ್ನವಿ ಮಾರ್ಗದರ್ಶನದಲ್ಲಿ ಎನ್‌ಆರ್ ಎಸಿಪಿ ಸುಧಾಕರ್ ಎ.ಬಿ., ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ನಿರಂಜನ್
ಕೆ.ಎಸ್, ಪಿ.ಎಸ್.ಐ.ಗಳಾದ ರಾಜು, ಗಣೇಶ್, ಚಂದ್ರಶೇಖರ್ ಎಸ್. ಇಟಗಿ ಸಿಬ್ಬಂದಿಗಳಾದ ಆದಂ, ಮೋಹನ್, ಸುನಿಲ್ ಕುಮಾರ್, ದೊಡ್ಡೇಗೌಡ, ಈರೇಶ್ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.