ಮಂಡ್ಯ: ವಿಸಿ ನಾಲೆ ಕಾಮಗಾರಿಗಾಗಿ ರೈತರಿಗೆ ತೊಂದರೆ ಕೊಡುವ ಪ್ರಶ್ನೆ ಇಲ್ಲ. ಹೊಸ ಟೆಕ್ನಾಲಜಿ ಬಳಸಿ ನಾಲೆ ಕಾಮಗಾರಿ ಕಾರ್ಯ ಮಾಡಲಾಗುತ್ತಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕಂಪ್ಲೇಂಟ್ ಕೊಡ್ಲಿ. ಅವರು ಹೇಳಿದ ಇಂಜಿನಿಯರ್ ಹತ್ತಿರವೇ ತನಿಖೆ ಮಾಡ್ಸೋಣಾ ಎಂದರು.

ವಿಸಿ ನಾಲೆ ಕಾಮಗಾರಿ ವಿಳಂಬ ಬಿಜೆಪಿ ಹೋರಾಟದ ವಿಚಾರವಾಗಿ ಮಾತನಾಡಿ, ಅವರು ಕಂಪ್ಲೆಂಟ್ ಕೊಡಲಿ, ಅವರ ಕಾಲದಲ್ಲಿ ಅಪ್ರೂವಲ್ ಆಗಿರೋದು. ಡ್ರೈಲ್ಯಾಂಡ್ ಗೆ ನೀರು ಕೊಡುವ ದೃಷ್ಟಿಯಿಂದ ನಾವು ಮಾಡಿದ್ದೇವೆ. ರೈತರಿಗೆ ಉಪಯೋಗ ಆಗಬೇಕು, ಆದ್ರೆ ಅವರು ಕಂಪ್ಲೇಂಟ್ ಕೊಡ್ಲಿ. ನನಗೆ ಕೊಡ್ತಾರೋ, ಇಲಾಖೆಗೆ ಕೊಡ್ತಾರೋ ಸಮರ್ಪಕವಾಗಿ ತನಿಖೆ ಮಾಡೋಣ ಎಂದು ತಿಳಿಸಿದರು.
ಕ್ಯೂರಿಂಗ್ ಮಾಡದಂತ ಟೆಕ್ನಾಲಜಿ ಬಂದಿದೆ ಅದನ್ನ ಬಳಸಿ ಕೆಲಸ ಆಗ್ತಿದೆ. ಉತ್ತಮವಾಗಿ ಕೆಲಸ ಆಗ್ತಿದೆ. ಕೆಲಸದಿಂದ ನೀರನ್ನ ನಿಲ್ಲಿಸಲ್ಲ. ಡ್ಯಾಂ ನಲ್ಲಿ ಸಂಗ್ರಹವಾದ ತಕ್ಷಣವೇ ರೈತರ ಬೆಳೆಗೆ ಬೇಕಾಗುವ ಸಂದರ್ಭದಲ್ಲಿ ಬಿಡ್ತೇವೆ. ಕೆಲಸ ನಿಲ್ಲಿಸಿ, ಮುಂದೆ ನೀರು ನಿಲ್ಲಿಸಿದ ಮೇಲೆ ಮತ್ತೆ ಕೆಲಸ ಆರಂಭ. ಕೆಲಸ ಮಾಡೋಕೋಸ್ಕರ ರೈತರಿಗೆ ತೊಂದರೆ ಕೊಡುವ ಪ್ರಶ್ನೆ ಇಲ್ಲ ಎಂದು ಹೇಳಿದರು.
