ಪಪುವಾ: ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರಿ ಭೂಕುಸಿತದಿಂದ ೨,೦೦೦ಕ್ಕೂ ಹೆಚ್ಚು ಜನರು ಜೀವಂತ ಸಮಾಧಿ ಆಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಕೇಂದ್ರ ಸೋಮವಾರ ಹೇಳಿದೆ. ಭೂಕುಸಿತವಾದ ಪ್ರದೇಶಕ್ಕೆ ತಲುಪಲು ಆಗುತ್ತಿರುವ ಸಮಸ್ಯೆಯಿಂದಾಗಿ ಕೆಲವೇ ಕೆಲವು ಮಂದಿಯನ್ನು ಕಾಪಾಡಲು ಮಾತ್ರ ಸಾಧ್ಯವಾಗಬಹುದು ಎಂದು ವರದಿಯಾಗಿದೆ.
ಭೂಕುಸಿತದಿಂದಾಗಿ ಜೀವಂತ ಸಮಾಧಿಯಾದವರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಯುಎನ್ ಏಜೆನ್ಸಿಯು ಸುಮಾರು ೬೭೦ಕ್ಕೂ ಅಧಿಕ ಮಂದಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಿದೆ. ೨,೦೦೦ಕ್ಕೂ ಅಧಿಕ ಮಂದಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಸೋಮವಾರ ರಾಷ್ಟ್ರೀಯ ವಿಪತ್ತು ಕೇಂದ್ರ ತಿಳಿಸಿದೆ.
ಭೂಕುಸಿತದಿಂದಾಗಿ ಕಟ್ಟಡಗಳು ಮತ್ತು ತೋಟ ಮೊದಲಾದವುಗಳು ಸಂಪೂರ್ಣವಾಗಿ ನೆಲಸಮವಾಗಿದೆ. ರಕ್ಷಣಾ ತಂಡಗಳು ಮತ್ತು ಬದುಕುಳಿದವರಿಗೆ ಅಪಾಯವನ್ನುಂಟು ಮಾಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.