Sunday, April 20, 2025
Google search engine

Homeಅಪರಾಧಕೌಟುಂಬಿಕ ಕಲಹ: ಪತ್ನಿಯ ತಲೆಯನ್ನು ಕತ್ತರಿಸಿ ಕೊಲೆಗೈದ ಪತಿ

ಕೌಟುಂಬಿಕ ಕಲಹ: ಪತ್ನಿಯ ತಲೆಯನ್ನು ಕತ್ತರಿಸಿ ಕೊಲೆಗೈದ ಪತಿ

ಕುಣಿಗಲ್ : ಕೌಟುಂಬಿಕ ಕಲಹ ಹಿನ್ನಲೆ ಗಂಡನೇ ತನ್ನ ಹೆಂಡತಿಯ ತಲೆಯನ್ನು ತುಂಡರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹುಲಿಯೂರುದುರ್ಗದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.

ಹುಲಿಯೂರುದುರ್ಗ ಟೌನ್ ವಾಸಿ ಪುಪ್ಪಲತಾ (35) ಹತ್ಯೆಗೆ ಒಳಗಾದ ಗೃಹಿಣಿ.

ಘಟನೆ ವಿವರ : ಕಳೆದ ಹಲವು ದಿನಗಳಿಂದ ಪುಪ್ಪಲತಾ ಹಾಗೂ ಪತಿ ಶಿವರಾಮ್ ನಡುವೆ ಜಗಳ ನಡೆಯುತ್ತಿತು ಎನ್ನಲಾಗಿದ್ದು , ಕಳೆದ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ, ಪುಪ್ಪಲತಾ ಮಲಗಿದ್ದನ್ನು ಕಾಯುತ್ತಿದ್ದ ಶಿವರಾಮ್ ಮಂಗಳವಾರ ನಸುಕಿನ ಜಾವ ಪುಪ್ಪಲತಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಬಳಿಕ ತಲೆ ಹಾಗೂ ದೇಹದ ಇತರೆ ಭಾಗಗಳನ್ನು ತುಂಡು ತುಂಡು ಮಾಡಿ, ಚರ್ಮವನ್ನು ಸುಲಿದು ವಿಕೃತಿ ಮೆರೆದಿದ್ದಾನೆ, ಆರೋಪಿ ಶಿವರಾಮ್ ನನ್ನು ಹುಲಿಯೂರುದುರ್ಗ ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ, ಮೃತಳಿಗೆ ನಾಲ್ಕು ವರ್ಷದ ಗಂಡು ಮಗು ಇದೆ.

RELATED ARTICLES
- Advertisment -
Google search engine

Most Popular