Monday, April 21, 2025
Google search engine

Homeರಾಜ್ಯಜೂನ್‌ನಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು ೧೩ ದಿನ ರಜೆ: ಕರ್ನಾಟಕದಲ್ಲಿ ೮ ದಿನ ಬ್ಯಾಂಕ್ ಇರಲ್ಲ

ಜೂನ್‌ನಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು ೧೩ ದಿನ ರಜೆ: ಕರ್ನಾಟಕದಲ್ಲಿ ೮ ದಿನ ಬ್ಯಾಂಕ್ ಇರಲ್ಲ

ನವದೆಹಲಿ: ಈ ವರ್ಷದ ಆರಂಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯ ಪ್ರಕಾರ ಜೂನ್‌ನಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು ೧೩ ದಿನಗಳವರೆಗೆ ರಜೆ ಇದೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ರಜಾ ದಿನಗಳು ವ್ಯತ್ಯಾಸ ಆಗಬಹುದು. ಕರ್ನಾಟಕದಲ್ಲಿ ೮ ದಿನ ಬ್ಯಾಂಕ್ ರಜೆ ಇರಲಿದೆ.

ಈ ರಜೆಗಳು ಜೂನ್ ತಿಂಗಳಲ್ಲಿ ಬರುವ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರವನ್ನು ಸಹ ಒಳಗೊಂಡಿರುತ್ತದೆ. ಈ ರಜಾದಿನಗಳ ಪಟ್ಟಿಯಲ್ಲಿರುವ ಕೆಲವು ರಜಾದಿನಗಳು ಮಾತ್ರವೇ ದೇಶದ ಎಲ್ಲ ರಾಜ್ಯಗಳಿಗೆ ಅನ್ವಯಿಸುತ್ತವೆ. ಕೆಲವು ರಜಾದಿನಗಳು ಕೆಲವೇ ರಾಜ್ಯಗಳಿಗೆ ಮಾತ್ರ ಅನ್ವಯಿಸುತ್ತವೆ.

ಬ್ಯಾಂಕ್‌ಗಳು ಡಿಜಿಟಲ್ ಆಗಿರುವುದರಿಂದ ಬಹುತೇಕ ವಹಿವಾಟುಗಳನ್ನು ಆನ್‌ಲೈನ್‌ನಲ್ಲೇ ಮಾಡಿಕೊಳ್ಳಬಹುದು. ಆದರೆ, ಕೆಲವೊಂದು ವ್ಯವಹಾರಗಳಿಗಾಗಿ ಖುದ್ದು ಬ್ಯಾಂಕ್‌ಗಳಿಗೆ ಭೇಟಿ ನೀಡಬೇಕಾಗುತ್ತದೆ.

ಜೂನ್ ತಿಂಗಳಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು ೧೩ ದಿನಗಳವರೆಗೆ ರಜೆ ಇದೆ. ಈ ೧೩ ದಿನದಲ್ಲಿ ಬರೋಬ್ಬರಿ ಏಳು ದಿನಗಳು ಶನಿವಾರ ಮತ್ತು ಭಾನುವಾರದ ರಜೆಗಳೇ ಆಗಿವೆ. ಒಡಿಶಾ ರಾಜ್ಯದಲ್ಲಿ ಜೂನ್ ೧೪ರಿಂದ ೧೭ರವರೆಗೆ ಸತತ ನಾಲ್ಕು ದಿನ ಬ್ಯಾಂಕ್ ರಜೆ ಇದೆ. ಪಂಜಾಬ್‌ನಲ್ಲಿ ಜೂನ್ ೮ರಿಂದ ೧೦ರವರೆಗೆ ಮೂರು ದಿನಗಳು ರಜೆ ಇರಲಿದೆ. ಕರ್ನಾಟದಲ್ಲಿ ಜೂನ್ ತಿಂಗಳಲ್ಲಿ ಶನಿವಾರ ಮತ್ತು ಭಾನುವಾರ ರಜೆ ಬಿಟ್ಟರೆ ಜೂನ್ ೧೭ಕ್ಕೆ ಬಕ್ರೀದ್ ಹಬ್ಬಕ್ಕೆ ಮಾತ್ರ ಬ್ಯಾಂಕ್ ರಜೆ ಇರಲಿದೆ. ಜೂನ್ ತಿಂಗಳಲ್ಲಿ ಯಾವೆಲ್ಲ ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

ಜೂನ್‌ನಲ್ಲಿ ಬ್ಯಾಂಕ್ ರಜಾದಿನಗಳು:
ಜೂನ್ ೧೦, ಸೋಮವಾರ: ಗುರು ಅರ್ಜುನ್ ದೇವ್ ಬಲಿದಾನ ದಿನ (ಪಂಜಾಬ್ ನಲ್ಲಿ ರಜೆ)
ಜೂನ್ ೧೪, ಶುಕ್ರವಾರ: ಪಹಿಲಿ ರಾಜ ದಿನ (ಒಡಿಶಾದಲ್ಲಿ ರಜೆ)
ಜೂನ್ ೧೫, ಶನಿವಾರ: ವೈಎಂಎ ದಿನ ಮತ್ತು ರಾಜ ಸಂಕ್ರಾಂತಿ ಹಬ್ಬ (ಮಿಜೋರಾಂ, ಒಡಿಶಾದಲ್ಲಿ ರಜೆ)
ಜೂನ್ ೧೭, ಸೋಮವಾರ: ಬಕ್ರೀದ್ ಹಬ್ಬ (ಮಿಜೋರಾಂ, ಸಿಕ್ಕಿಂ, ಅರುಣಾಚಲ ಹೊರತುಪಡಿಸಿ ಉಳಿದೆಡೆ ರಜೆ)
ಜೂನ್ ೧೮, ಮಂಗಳವಾರ: ಬಕ್ರೀದ್ ಹಬ್ಬ (ಜಮ್ಮು ಕಾಶ್ಮೀರದಲ್ಲಿ ರಜೆ)
ಜೂನ್ ೨೧: ವಟ ಸಾವಿತ್ರ ವ್ರತ (ಹಲವು ರಾಜ್ಯಗಳಲ್ಲಿ ರಜೆ)

ಈ ಮೇಲಿನ ದಿನಗಳನ್ನು ಹೊರತುಪಡಿಸಿದರೆ ಜೂನ್‌ನಲ್ಲಿ ಬರುವ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರ ಭಾರತದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳು ರಜೆ ಇರುತ್ತವೆ.

RELATED ARTICLES
- Advertisment -
Google search engine

Most Popular