ಮೈಸೂರು: ಜೆಎಸ್‌ಎಸ್ ಮಹಾ ವಿದ್ಯಾಪೀಠದ ೭೦ನೇ ವರ್ಷಾಚರಣೆ ಹಾಗೂ ವಿಶ್ವ ತಾಯಂದಿರ ದಿನಾಚರಣೆ ಅಗವಾಗಿ ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಜೂ.೩೦ರವರೆಗೆ ಉಚಿತ ಸಾಮಾನ್ಯ ಹೆರಿಗೆ ಸೌಲಭ್ಯ ಹಾಗೂ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಮತ್ತು ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್. ಬಸವನಗೌಡಪ್ಪ ತಿಳಿಸಿದರು.
ಈ ಅಭಿಯಾನ ವೇಳೆ ಸಾಮಾನ್ಯ ಹೆರಿಗೆ ಮತ್ತು ಔಷಧಿಗಳು ಸಂಪೂರ್ಣ ಉಚಿತವಾಗಿರುತ್ತವೆ. ಅಲ್ಲದೆ, ಸಿಸೇರಿಯನ್‌ಗೆ ಶೇ. ೪೦ ರಿಂದ ೫೦ ರಷ್ಟು ರಿಯಾಯಿತಿ ಇರಲಿದೆ. ಜನಿಸಿದ ಮಗು ಹೆಚ್ಚಿನ ಚಿಕಿತ್ಸೆಗೆ ದಾಖಲಾದರೆ ಚಿಕಿತ್ಸೆ ವೆಚ್ಚದಲ್ಲಿ ರಿಯಾಯಿತಿ ಹಾಗೂ ಆಸ್ಪತ್ರೆಯಿಂದ ೨೫ ಕಿಮೀ ವ್ಯಾಪ್ತಿಯಲ್ಲಿ ಉಚಿತ ಪ್ರಯಾಣವ್ಯವಸ್ಥೆ ಇರಲಿದೆ.
ಜೂ ೩೦ರೊಳಗೆ ನೋಂದಣಿ ಆದವರಿಗೂ ಈ ಸೌಲಭ್ಯ ದೊರೆಯಲಿದೆ. ಇನ್ನು, ಸಾಮಾನ್ಯ ವಾರ್ಡ್‌ಗೆ ಮಾತ್ರ ಈ ಸೌಲಭ್ಯ ಇದ್ದು, ಹೆಚ್ಚಿನ ಮಾಹಿತಿಗೆ ದೂ. ೮೨೯೬೬ ೭೩೨೪೧ನ್ನು ಸಂಪರ್ಕಿಸಬಹುದಾಗಿದೆ ಎಂದರು.