ಮೈಸೂರು: ಪುಷ್ಪಾಂಜಲಿ ಮತ್ತು ಅಗರ್ವಾಲ್ ಸಮಾ ಥ್ಜದ ಸಂಯುಕ್ತ ಆಶ್ರಯದಲ್ಲಿ ಸರ್ವ ರಾಜಸ್ಥಾನಿ ಸಮಾಜದ ನೆರವಿನೊಂದಿಗೆ ಮೇ 30ರ ಗುರುವಾರ ಸಂಜೆ 4 ಗಂಟೆಗೆ ನಗರದ ಚಿಕ್ಕ ಗಡಿಯಾರ ಮುಂಭಾಗದಲ್ಲಿರುವ ಟೌನ್ ಹಾಲ್ ಸಭಾಂಗಣದಲ್ಲಿ ಮಹಾಮಂಡಲೇಶ್ವರ ಸ್ವಾಮಿ ಜ್ಞಾನಾನಂದರ ಸಾನ್ನಿಧ್ಯದಲ್ಲಿ ಒಂದು ದಿನದ ದಿವ್ಯ ಗೀತಾ ಸತ್ಸಂಗ ಪ್ರವಚನ ಆಯೋಜಿಸಲಾಗಿದೆ.
ಪ್ರವಚನ ಸಭೆಯಲ್ಲಿ ದತ್ತ ಅವಧೂತ ಪೀಠದ ಸ್ವಾಮಿ ವಿಜಯಾನಂದ ತೀರ್ಥ, ಚಿಂತಾಮಣಿ ಮಾತೃಪುರಿ ಆಶ್ರಮದ ಅಮೃತ ಚೈತನ್ಯಮಯಿ ದೇವಿ, ಅಖಿಲ ಭಾರತ ಅಗರವಾಲ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಮತ್ತು ಮಿತ್ತಲ್ ಉಪಸ್ಥಿತರಿರುವರು ಎಂದು ಮೈಸೂರು ಅಗರವಾಲ್ ಸಮಾಜದ ಅಧ್ಯಕ್ಷ ಶ್ರೀ ಕೃಷ್ಣ ಮಿತ್ತಲ್ ತಿಳಿಸಿದ್ದಾರೆ.