Sunday, April 20, 2025
Google search engine

Homeರಾಜ್ಯಬಿಎಚ್ಎಸ್ ಕ್ರಿಯಾ ಸಮಿತಿ ಸದಸ್ಯರ ಸಭೆ, ಭೂ ಸಕ್ರಮೀಕರಣ ಸಮಿತಿಯ ನೂತನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

ಬಿಎಚ್ಎಸ್ ಕ್ರಿಯಾ ಸಮಿತಿ ಸದಸ್ಯರ ಸಭೆ, ಭೂ ಸಕ್ರಮೀಕರಣ ಸಮಿತಿಯ ನೂತನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

ವರದಿ: ಎಡತೊರೆ  ಮಹೇಶ್

ಹೆಚ್  ಡಿ ಕೋಟೆ: APPI ಹಾಗೂ ಪ್ರತಿಭೆ ಸಂಸ್ಥೆಯ ಸಹಯೋಗದಲ್ಲಿ ಹೆಚ್ ಡಿ ತಾಲ್ಲೂಕು  ಮತ್ತು ಸರಗೂರು ತಾಲ್ಲೂಕುಗಳ  ಕ್ಷೇತ್ರ ಮಟ್ಟದ ಬಿಎಚ್ಎಸ್ ಕ್ರಿಯಾ ಸಮಿತಿ ಸದಸ್ಯರುಗಳ ಸಭೆ ಹಾಗೂ ಎಚ್ ಡಿ ಕೋಟೆ ತಾಲ್ಲೂಕಿನ ಭೂ ಸಕ್ರಮೀಕರಣ ಸಮಿತಿಯ ನೂತನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಿರ್ದೇಶಕರಾದ ಪ್ರಸನ್ನ ಮೂರ್ತಿ ಸರ್ ಪ್ರಸ್ತಾವಿಕ ನುಡಿಗಳನ್ನಾಡುತ್ತಾ, ಈಗಾಗಲೇ ಅರ್ಜಿ ಸಲ್ಲಿಸಿರುವ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅವರು ಯಾವುದೇ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈಗಿನ ಸಮಿತಿಯ ಸದಸ್ಯರುಗಳು ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಆದಷ್ಟು ಬೇಗ ಬಗೆಹರಿಸಲು ಪ್ರಯತ್ನಿಸಬೇಕೆಂದು ಮಾತನಾಡಿದರು.

ಭೂ ಸಕ್ರಮೀಕರಣ ಸಮಿತಿಯ ಸದಸ್ಯರಾದ ಪ್ರಭುಸ್ವಾಮಿ ಯವರು ಮಾತನಾಡುತ್ತಾ ನಿಮ್ಮ ಸಮಸ್ಯೆಗಳನ್ನು ಸಮಿತಿಯ ಮುಂದೆ ತಿಳಿಸಿ ಅಲ್ಲಿ ನಾವು ವಾಸ್ತವಂಶವನ್ನು ಪರಿಶೀಲಿಸಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದರು.

ಮತ್ತೊಬ್ಬರು ಸಮಿತಿಯ ಸಮಿತಿ ಸದಸ್ಯರಾದ ಶ್ರೀಯುತ ಬಾಲಯ್ಯರವರು ಮಾತನಾಡುತ್ತಾ ನಾನು ಈಗಾಗಲೇ ಎಚ್ ಡಿ ಕೋಟೆಯಲ್ಲಿ ಸಮಸ್ಯೆಗಳ ಸರಮಾಲೆಯನ್ನು ನೋಡುತ್ತಿದ್ದು, ನಾವು ರೈತ ಕುಟುಂಬದಿಂದ  ಬಂದಿರುವುದರಿಂದ ಸಾಗುವಳಿದಾರರ ಸಮಸ್ಯೆಯನ್ನು ಬೇಗ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ಮತ್ತೊಬ್ಬರು ಸಮಿತಿಯ ಸದಸ್ಯರಾದ ತಾಯಮ್ಮ, ಸೋಮೇಗೌಡರವರು ಮಾತನಾಡುತ್ತ ಈಗಾಗಲೇ ತಹಸಿಲ್ದಾರ್ ರವರ ಜೊತೆ ನಾವು ಸಮಸ್ಯೆಗಳ ಬಗ್ಗೆ ಮಾತನಾಡಿದ್ದು ಮುಂದಿನ ಸಭೆಯಲ್ಲಿ ಚರ್ಚಿಸಿ ಬಗೆಹರಿಸಲು ಪ್ರಯತ್ನಿಸುತ್ತೇವೆ ಒಟ್ಟಾರೆಯಾಗಿ ಎಲ್ಲಾ ಸದಸ್ಯರು ನಾವು ಬಡ ಕುಟುಂಬದಿಂದ ಹಾಗೂ ರೈತ ಕುಟುಂಬದಿಂದ ಬಂದು ಸಮಸ್ಯೆಗಳು ನಮಗೂ ಸಹ ಗೊತ್ತಿರುವುದರಿಂದ ನಮ್ಮ ಸಮಸ್ಯೆಗಳು ಹೀಗಿರುವ ಸಾಗುಳಿದಾರರಿಗೆ ಸಮಸ್ಯೆಗಳು ಆಗುವುದು ಬೇಡ ಎಂದು ಅರ್ಥ ಮಾಡಿಕೊಂಡು ನಾವೇ, ಆದಷ್ಟು ಬೇಗ ಪ್ರಾಮಾಣಿಕವಾಗಿ ಸ್ಥಳ ಪರಿಶೀಲನೆ ಮಾಡಿ ಸಾಗುವಳಿಯನ್ನು ಕೊಡಲು ಪ್ರಯತ್ನ ಮಾಡುತ್ತೇವೆ ಎಂದು ನುಡಿದರು.

ಪ್ರಭು ಸ್ವಾಮಿ ಮಾತನಾಡುತ್ತಾ, ನಿಮ್ಮ ಎಲ್ಲಾ ಸಮಸ್ಯೆಗಳನ್ನು ಈಗ ನಾವು ಆಲಿಸಿದ್ದು ಈ ಸಮಸ್ಯೆಗಳನ್ನು ತಹಸಿಲ್ದಾರ್ ಅವರ ಸಮ್ಮುಖದಲ್ಲಿ ಮಾತನಾಡಿ ಮತ್ತೊಮ್ಮೆ ನಿಮ್ಮೆಲ್ಲರ ಸಮ್ಮುಖದಲ್ಲಿ ಮಾತನಾಡಿ ಸಮಸ್ಯೆಗಳನ್ನೂ ಬಗೆಹರಿಸಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಮುಂದುವರಿದು ನಿರ್ದೇಶಕರಾದ ಪ್ರಸನ್ನ ಮೂರ್ತಿ ಸರ್ ಮಾತನಾಡುತ್ತಾ, ಈಗಾಗಲೇ ನ್ಯಾಯಾಲದಲ್ಲಿ ಮೊಕದ್ದಮೆ ಮೆಗಳನ್ನು  ಹಾಕಿದರೆ ಅಲ್ಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾಗುತ್ತದೆ. ಕಾನೂನ ಪ್ರಕಾರವಾಗಿ ರೈತರು ಅರ್ಜಿ ಸಲ್ಲಿಸಿದರೆ ಸಮಿತಿಯು ಮುಂದೆ ಅದನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುವುದರ  ಮುಖಾಂತರ. ಅರ್ಹ ಅರ್ಜಿದಾರರಿಗೆ ಸಾಗುವಳಿಯನ್ನು ಕೊಡಿಸಲು ಪ್ರಯತ್ನ ಮಾಡಲಾಗುವುದು ಎಂದು ಮಾತನಾಡಿದರು.

ಎಲ್ಲಾ ರೈತರು ಸಮಿತಿಯ ಸದಸ್ಯರುಗಳು ಹೇಳಿದ ಹಾಗೂ ಮಾತನಾಡಿದ ಹಾಗೂ ರೈತರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸಮಂಜಸವಾಗಿ ಉತ್ತರವನ್ನು ನೀಡಿದರು ಮುಂದಿನ ತಿಂಗಳು 10 ನೇ ತಾರೀಖಿನ ನಂತರ ನಾವು ತಹಸಿಲ್ದಾರ್ ರವರ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ಒಂದು ಸಭೆಯನ್ನು ಕರೆದು ಮುಖಾಮುಖಿ ಅಲ್ಲೇ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕು  ಎಂದರು.

ಎಲ್ಲಾ ರೈತರು ತಿಳಿಸಿದರು ಅದಕ್ಕೆ ಸಮಿತಿಯ ಸದಸ್ಯರು ಒಪ್ಪಿಗೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಸಂಯೋಜಕರಾದ ಶಿವರಾಜು  ಪ್ರಾರ್ಥನೆ ಸಲ್ಲಿಸಿದರು. ಗೋಪಾಲರಾಜು ಸ್ವಾಗತ ಕೋರಿದರು. ಭೂ ಸಕ್ರಮೀಕರಣ ನೂತನ ಸಮಿತಿಗೆ ಸದಸ್ಯರುಗಳಾಗಿ ಆಯ್ಕೆಯಾದ ತಾಯಮ್ಮ ಸೋಮೇಗೌಡ, ಬಾಲಯ್ಯ, ಪ್ರಭುಸ್ವಾಮಿ, ಡಾ. ಕುಮುದಿನಿ ಜೆ ಎಸ್ ಎಸ್ ಅಸೋಸಿಯೇಟ್ ಪ್ರೊಫೆಸರ್ ನಿಸರ್ಗ ಸಂಸ್ಥೆಯ ನಿರ್ದೇಶಕರಾದ ಪ್ರಭು ಎನ್ ಪ್ರತಿಭೆ ಸಂಸ್ಥೆಯ ನಿರ್ದೇಶಕರಾದ ಪ್ರಸನ್ನ ಮೂರ್ತಿ, ಸಂಸ್ಥೆಯ ಮಾರ್ಷಲಿನ್  ಜ್ಯೋತಿ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾರ್ಸಲಿನ್ ಸೇರಿದಂತೆ ನೂರಾರು ರೈತರು ಭಾಗವಹಿಸಿದರು.

RELATED ARTICLES
- Advertisment -
Google search engine

Most Popular