ಮಂಡ್ಯ: ಹಾಸನ ಪೆನ್ ಡ್ರೈವ್ ಪ್ರಕರಣದ ವಿಚಾರವಾಗಿ ಮಂಡ್ಯದಲ್ಲಿ ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಪ್ರತಿಕ್ರಿಯಿಸಿದ್ದು, ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಮೇಲೆ ಪ್ರಭಾವ ಬೀರಲ್ಲ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ, ಪಕ್ಷಕ್ಕೂ ಸಂಬಂಧ ಇಲ್ಲ. ಈ ಪ್ರಕರಣ SIT ಮುಂದೆ ಇದೆ ತನಿಖೆಯಾಗುತ್ತೆ. ಈ ಕೃತ್ಯದ ಬಗ್ಗೆ ತನಿಖೆ ನಂತರ ಸತ್ಯಸತ್ಯತೆ ಹೊರ ಬೀಳಲಿದೆ. ಅವರನ್ನ ಪಕ್ಷದಿಂದ ಹೊರ ಹಾಕಾಗಿದೆ. ದಯವಿಟ್ಟು ಈ ವಿಚಾರದ ಬಗ್ಗೆ ಚರ್ಚೆ ಬೇಡ ಎಂದು ಹೇಳಿದರು.