ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್ ಜನ್ಮದಿನ ಹಿನ್ನಲೆ ಅಂಬಿ ಹುಟ್ಟೂರಿಗೆ ಸಂಸದೆ ಸುಮಲತಾ ಭೇಟಿ ನೀಡಿ, ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆ ಗ್ರಾಮಕ್ಕೆ ಪುತ್ರ ಅಭಿಷೇಕ್ ಜೊತೆ ಸುಮಲತಾ ಅಂಬರೀಶ್ ಆಗಮಿಸಿ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅಂಬರೀಶ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ನಂತರ ಕೇಕ್ ಕಟ್ ಮಾಡುವ ಮೂಲಕ ಗ್ರಾಮಸ್ಥರ ಜೊತೆ ಅಂಬಿ ಜನ್ಮದಿನ ಆಚರಣೆ ಮಾಡಿದ್ದಾರೆ. ಮಕ್ಕಳಿಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ಗ್ರಾಮದ ಜನರು ಸಂಸದೆ ಸುಮಲತಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಇದೇ ವೇಳೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಭಾಗಿಯಾಗಿದ್ದರು.