ಬಳ್ಳಾರಿ: ಸಂಡೂರು ತಾಲ್ಲೂಕಿನ ತಾರಾನಗರ ಗ್ರಾಮದ 5 ನೇ ವಾರ್ಡ್‍ನ ನಿವಾಸಿ ವಿದ್ಯಾಶ್ರೀ ಎನ್ನುವ 19 ವರ್ಷದ ಯುವತಿ ಮೇ 22 ರಂದು ಕಾಣೆಯಾಗಿರುವ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಯುವತಿಯ ಚಹರೆ ಗುರುತು: ಎತ್ತರ 5.4 ಅಡಿ, ಸಾಧಾರಣ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, ತಲೆಯಲ್ಲಿ ಸುಮಾರು 15 ಇಂಚು ಕಪ್ಪು ಕೂದಲು ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಕೆಂಪು ಬಣ್ಣದ ಚೂಡಿದಾರ, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ವೇಲ್ ಧರಿಸಿದ್ದು, ಕನ್ನಡ, ಹಿಂದಿ (ಲಂಬಾಣಿ) ಭಾಷೆ ಮಾತನಾಡುತ್ತಾಳೆ. ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಂಡೂರು ಪೊಲೀಸ್ ಠಾಣೆಯ ಮೊ.9740604025 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.