Sunday, April 20, 2025
Google search engine

Homeಅಪರಾಧಕಾನೂನುಕೇಂದ್ರ ಸರ್ಕಾರದ ಜಂಟಿ ನಿರ್ದೇಶರಾಗಿ ಇ.ಡಿ ಕೇಡರ್‌ ದರ್ಜೆಯ 11 ಅಧಿಕಾರಿಗಳಿಗೆ ಪದೋನ್ನತಿ

ಕೇಂದ್ರ ಸರ್ಕಾರದ ಜಂಟಿ ನಿರ್ದೇಶರಾಗಿ ಇ.ಡಿ ಕೇಡರ್‌ ದರ್ಜೆಯ 11 ಅಧಿಕಾರಿಗಳಿಗೆ ಪದೋನ್ನತಿ

ನವದೆಹಲಿ: ಜಾರಿ ನಿರ್ದೇಶನಾಲಯದ ಕೇಡರ್‌ ದರ್ಜೆಯ 11 ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಜಂಟಿ ನಿರ್ದೇಶರನ್ನಾಗಿ ಪದೋನ್ನತಿ ನೀಡಿದೆ.

ಇಷ್ಟೊಂದು ಪ್ರಮಾಣದ ಕೇಡರ್ ಅಧಿಕಾರಿಗಳನ್ನು ಒಂದೇ ಬಾರಿಗೆ ಜಂಟಿ ನಿರ್ದೇಶಕರಾಗಿ ಬಡ್ತಿ ನೀಡಿರುವುದು ಇದೇ ಮೊದಲು ಎನ್ನಲಾಗಿದೆ. ಈ ಹಿಂದೆ ಒಂದೊ ಎರಡು ಅಧಿಕಾರಿಗಳಿಗೆ ಮಾತ್ರ ಬಡ್ತಿ ನೀಡಲಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಇಲಾಖೆ 11 ಮಂದಿಗೆ ಬಡ್ತಿ ನೀಡಿ ಮಂಗಳವಾರ ಆದೇಶ ಹೊರಡಿಸಿದೆ.

ಜಂಟಿ ನಿರ್ದೇಶಕ ಹುದ್ದೆಯು ಜಾರಿ ನಿರ್ದೇಶನಾಲಯದಲ್ಲಿ ಉನ್ನತ ಆಡಳಿತಾತ್ಮಕ ಸ್ಥಾನವಾಗಿದ್ದು, ಹಣದ ವರ್ಗಾವಣೆ ಮತ್ತು ವಿದೇಶಿ ವಿನಿಮಯ ಉಲ್ಲಂಘನೆಗೆ ಸಂಬಂಧಿಸಿದ ತನಿಖೆಗಳನ್ನು ಮೇಲ್ವಿಚಾರಣೆ ಮಾಡಲು ಈ ಸ್ತರದ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ.

27 ವಲಯ ಅಧಿಕಾರಿಗಳು ಸೇರಿದಂತೆ ಜಾರಿ ನಿರ್ದೇಶನಾಲಯಕ್ಕೆ ದೇಶದಾದ್ಯಂತ 30 ಜಂಟಿ ನಿರ್ದೇಶಕರ ಹುದ್ದೆ ಇದೆ.

RELATED ARTICLES
- Advertisment -
Google search engine

Most Popular