ಮಂಡ್ಯ: ಲೋಕಸಭೆ ಚುನಾವಣೆಯಲ್ಲಿ ತಮ್ಮ ಗೆಲುವು ಖಚಿತ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅಲಿಯಾಸ್ ವೆಂಕಟರಮಣೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೂರಕ್ಕೆ ನೂರಕ್ಕೆ ನಾನು ಗೆಲ್ತೇನೆ. ಯಾವುದೇ ಆತಂಕ ಬೇಡ. ಮಂಡ್ಯ ಜನರು ಹಾಗೂ ನಮ್ಮ ನಾಯಕರ ಸಪೋರ್ಟ್ ಜೊತೆಗೆ ಆಶೀರ್ವಾದ ಇದೆ. ಅಂತರ ಬೇಡಾ ಒಂದು ಸಾವಿರ ಮತದಿಂದ ಗೆದ್ದರು ಗೆಲುವು, ಒಂದು ಲಕ್ಷ ಮತದಿಂದ ಗೆದ್ದರು ಗೆಲುವು. ಗೆಲುವು ಮುಖ್ಯ. ನಾನು ಗೆದ್ದೆ ಗೆಲ್ತೇನೆ ಎಂದು ಹೇಳಿದರು.