ಬೆಂಗಳೂರು: ರಾಜ್ಯದಲ್ಲಿ ‘ಲಿಕ್ವಿಡ್ ನೈಟ್ರೋಜನ್’ ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಸ್ಮೋಕಿಂಗ್ ಬಿಸ್ಕತ್, ಡೆಸರ್ಟ್ಸ್ ಹಾಗು ಇತರೆ ತಿನಿಸುಗಳನ್ನು ಗ್ರಾಹಕರಿಗೆ ಒದಗಿಸುವ ಸಂದರ್ಭದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಸಲಾಗುತ್ತಿದೆ.
ಸರ್ಕಾರದ ಆದೇಶ ಉಲ್ಲಂಘಿಸಿದಲ್ಲಿ ಆಹಾರ ತಯಾರಕರಿಗೆ 7 ವರ್ಷ ಜೀವಾವಧಿ ಜೈಲು ಶಿಕ್ಷೆ ಹಾಗು 10 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ನಿಯಮದ ಪ್ರಕಾರ, ಲಿಕ್ವಿಡ್ ನೈಟ್ರೋಜನ್ ಅನ್ನು ಹೈನು ಉತ್ಪನ್ನ ಮತ್ತು ಐಸ್ ಕ್ರೀಂ ತಯಾರಿಕೆಯ ಸಮಯದಲ್ಲಿ ಮಾತ್ರ ಬಳಸಲು ಅನುಮೋದನೆ ಇದೆ. ಆದರೆ ಸ್ಮೋಕಿಂಗ್ ಬಿಸ್ಕತ್, ಡೆಸರ್ಟ್ ತಿನಿಸುಗಳನ್ನು ಸೇವನೆಗಾಗಿ ನೀಡುವ ಸಂದರ್ಭದಲ್ಲಿ ಈ ಲಿಕ್ವಿಡ್ ಉಪಯೋಗಿಸುವುದಕ್ಕೆ ನಿರ್ಬಂಧವಿದೆ.
ಇತ್ತೀಚಿಗೆ, ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದು 12 ವರ್ಷದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರವಾಗಿತ್ತು. ಇದು ಜನರಲ್ಲಿ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಲಿಕ್ವಿಡ್ ನೈಟ್ರೋಜನ್ ಪಾನ್ ನಿಷೇಧಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು.