ಮೈಸೂರು: ನಗರದ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಪ್ರಾಯೋಗಿಕ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ 2024 25ರ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ, ವಿದ್ಯಾರ್ಥಿಗಳಿಗೆ ಹೂಗೊಚ್ಚ ಮತ್ತು ಸಿಹಿ ನೀಡಿ ಸ್ವಾಗತಿಸಲಾಯಿತು.
ನರ್ಸರಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಅಕ್ಷರಭ್ಯಾಸ ಮಾಡಿಸಿ ಸ್ವಾಗತ ಕೋರಲಾಯಿತು. ಜೊತೆಗೆ ಪಠ್ಯ ಪುಸ್ತಕ ವಿತರಣೆ ಹಾಗೂ ಕ್ಷೀರ ಭಾಗ್ಯ ಯೋಜನೆಯ ಹಾಲು ವಿತರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ಗುರುಸ್ವಾಮಿ ಎಂ ಮಾತನಾಡಿ, ಜ್ಞಾನದ ಆರಂಭವಾಗಬೇಕಾದರೆ ಅಕ್ಷರಾಭ್ಯಾಸ ಬಹಳ ಮುಖ್ಯ ಆದರೆ, ಅಕ್ಷರಗಳನ್ನು ಅಭ್ಯಾಸಿಸುವಾಗಲೇ ಮಕ್ಕಳಲ್ಲಿ ದೇವರ ಮೇಲೆ ಭಕ್ತಿ ಹಾಗೂ ಹಿರಿಯರ ಮೇಲೆ ಬಗ್ಗೆ ಗೌರವ ಮೂಡಿಸುವಂತಹ ಕಾರ್ಯವಾಗಬೇಕು. ಕುಟುಂಬ ಮತ್ತು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿತಾಗ ವಿದ್ಯೆ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರು, ಶಿಕ್ಷಕೇತರರು, ಮತ್ತು ಪೋಷಕರು ಹಾಜರಿದ್ದರು.
ಒಟ್ಟಾರೆ ಶಾಲೆಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತು.