ಮಂಗಳೂರು(ದಕ್ಷಿಣ ಕನ್ನಡ): ಮಸೀದಿ ವಿಚಾರದಲ್ಲಿ ಸೌಹಾರ್ದತೆಯಿಂದ ಇರಬೇಕು. ಸಮಾಜದಲ್ಲಿ ಸಾಮರಸ್ಯ ಬೇಕು. ಅನಗತ್ಯ ವಿಚಾರದ ಬಗ್ಗೆ ವಿವಾದ ಎಬ್ಬಿಸೋದು ನೋವು ತರುವ ವಿಚಾರ ಎಂದು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಹೇಳಿದ್ದಾರೆ.
ಅವರು ಇಂದು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರೋ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ರು.
ಇದ್ರ ಹಿಂದಿರೋ ಕಾಣದ ಕೈವಾಡ ತಿಳಿಯುವ ಅಗತ್ಯವಿದೆ. ಎಲ್ಲದಕ್ಕೂ ಪೊಲೀಸರು ಕೇಸ್ ಮಾಡಲ್ಲ. ಈ ವಿಚಾರ ಬಂದಾಗ ನೇರ ಸುಮೊಟೊ ಸರಿಯಾದ ಕ್ರಮ ಅಲ್ಲ. ದಕ್ಷಿಣ ಕನ್ನಡದಲ್ಲಿ ಇದುವರೆಗೆ ಇಂತಹ ವಿಚಾರದಲ್ಲಿ ಸಮಸ್ಯೆ ಆಗಿಲ್ಲ. ಇಂತಹ ಘಟನೆಯನ್ನು ಎತ್ತಿ ಹಿಡಿದು ಯಾವ ಸಂದೇಶ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ವಿಪಕ್ಷದವರಿಗ ಬೇರೆ ಕೆಲಸ ಇಲ್ಲದಾಗ ಹೀಗೆ ಆರೋಪ ಎತ್ತಿಕಟ್ಟಲು ಯತ್ನಿಸಿದ್ದಾರೆ. ಮುಂದೆ ಇಂತಹ ಕೆಲಸ ಆಗಬಾರದು ಎಂದರು.